ಕೊಳ್ಳೇಗಾಲ:ಕೊಳ್ಳೇಗಾಲ ನಗರಸಭೆಯ ಚುನಾವಣೆಯಾಗಿ 29 ತಿಂಗಳ ಬಳಿಕ ಸಾಮಾನ್ಯ ಸಭೆ ನಡೆಸಿ ನಗರದ ಅಭಿವೃದ್ದಿ ಹಾಗೂ ಸಮಸ್ಯೆಗಳನ್ನು ಬಗ್ಗೆ ಚರ್ಚಿಸುವ ಭಾಗ್ಯ ಸದಸ್ಯರಿಗೆ ಇಂದು ದೊರಕಿದೆ.
ಕಳೆದ 2 ತಿಂಗಳ ಹಿಂದೆಯಷ್ಟೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದು ಅಧ್ಯಕ್ಷರಾಗಿ ಗಂಗಮ್ಮ, ಉಪಾಧ್ಯಕ್ಷರಾಗಿ ಕವಿತಾ ಆಯ್ಕೆಯಾಗಿದ್ದಾರೆ. 29 ತಿಂಗಳ ಬಳಿಕ ನಡೆದ ಚೊಚ್ಚಲ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಭಾಗಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.