ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ ಪೊಲೀಸರಿಂದ ಪುನೀತ್ ಸ್ಮರಣೆ : ಅನ್ನ ಸಂತರ್ಪಣೆ - ಪುನೀತ್ ಸ್ಮರಣೆ ಕಾರ್ಯಕ್ರಮ

ಯುವರತ್ನ ಪುನೀತ್​ ರಾಜಕುಮಾರ್ (Puneeth Rajkumar) ಅಗಲಿಕೆ ಹಿನ್ನೆಲೆ ಕೊಳ್ಳೆಗಾಲ ಪಟ್ಟಣ ಪೊಲೀಸರು ಇಂದು ಅಪ್ಪುಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡಿದರು..

kollegal-city-police-puneeth-smarane-program
ಪುನೀತ್ ಸ್ಮರಣೆ

By

Published : Nov 14, 2021, 4:13 PM IST

ಕೊಳ್ಳೇಗಾಲ :ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಸ್ಮರಣಾರ್ಥವಾಗಿ ಪಟ್ಟಣ ಪೊಲೀಸರು (Kollegal Town Police Station) ಇಂದು ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಅಪ್ಪುಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಕೊಳ್ಳೇಗಾಲ ಪೊಲೀಸರಿಂದ ಪುನೀತ್ ಸ್ಮರಣೆ

ಠಾಣೆಯ ಸಬ್​ ಇನ್ಸ್​ಪೆಕ್ಟರ್ ವಿ.ಚೇತನ್ ನೇತೃತ್ವದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಠಾಣೆ ಮುಂಭಾಗ ಸಿಬ್ಬಂದಿ ಎಲ್ಲರೂ ಸೇರಿ ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚರಣೆ ಆಚರಿಸಿ ಯುವರತ್ನನ ಅಗಲಿಕೆಗೆ ಸಂತಾಪ ಸೂಚಿಸಿದರು. ಖುದ್ದು ಪೊಲೀಸ್ ಸಿಬ್ಬಂದಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಪ್ಪು ನಿಧನವಾಗಿ ಇಂದಿಗೆ 15 ದಿನಕಳೆದರೂ ಅವರ ಸ್ಮರಣಾರ್ಥ ಕಾರ್ಯಕ್ರಮ ಪಟ್ಟಣದಾದ್ಯಂತ ನಡೆಯುತ್ತಲೇ ಇವೆ.

ABOUT THE AUTHOR

...view details