ಚಾಮರಾಜನಗರ:ಜಿಲ್ಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಂಯುಕ್ತವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಗಾಳಿಪಟ ಉತ್ಸವವನ್ನು ಸಚಿವ ಸುರೇಶ್ ಕುಮಾರ್ ಗಾಳಿಪಟ ಹಾರಿಸುವ ಮೂಲಕ ಉದ್ಘಾಟಿಸಿದರು.
2007ರ ಬಳಿಕ ಎರಡನೇ ಬಾರಿ ಜಿಲ್ಲಾ ಕೇಂದ್ರದಲ್ಲಿ ಆಯೋಜನೆಗೊಂಡ ಉತ್ಸವ ತಕ್ಕಮಟ್ಟಿಗೆ ಯಶಸ್ಸಾಗಿದ್ದು, ಗಾಳಿಯ ವೇಗದ ಚಲನೆ ಇಲ್ಲದಿದ್ದರಿಂದ ಸ್ಪರ್ಧಿಗಳು ನಿರಾಸೆಗೊಂಡರು. 12 ವರ್ಷದೊಳಗಿನ ಕಿರಿಯರಿಗೆ, 13-21 ವರ್ಷದ ಕಿಶೋರರಿಗೆ, 21 ವರ್ಷ ಮೇಲ್ಪಟ್ಟವರಿಗೆ ಹಾಗೂ 22 ವರ್ಷದ ಮೇಲ್ಪಟ್ಟ 5 ಜನರ ತಂಡಗಳಂತೆ 4 ವಿಭಾಗಗಳಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 80 ಮಂದಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.