ಕರ್ನಾಟಕ

karnataka

ETV Bharat / state

ಕೊಳ್ಳೇಗಾಲದಲ್ಲಿ ಅಪ್ರಾಪ್ತೆ ಅಪಹರಣ ಯತ್ನ; ಕೇರಳ ಮೂಲದ ನಾಲ್ವರ ಬಂಧನ - ನಾಲ್ವರ ಬಂಧನ

ಅಪ್ರಾಪ್ತೆಯನ್ನು ಅಪಹರಿಸಲು ಯತ್ನಿಸಿದ್ದ ನಾಲ್ವರನ್ನು ಚಾಮರಾಜನಗರದ ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ.

kidnap-of-a-minor-in-kollegala-four-arrested
ಕೊಳ್ಳೇಗಾಲದಲ್ಲಿ ಅಪ್ರಾಪ್ತೆ ಅಪಹರಣ : ಕೇರಳ ಮೂಲದ ನಾಲ್ವರ ಬಂಧನ

By ETV Bharat Karnataka Team

Published : Jan 3, 2024, 3:43 PM IST

Updated : Jan 3, 2024, 3:55 PM IST

ಚಾಮರಾಜನಗರ : ಕೂದಲು ಮಾರುತ್ತಿದ್ದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದ ನಾಲ್ವರನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕೇರಳ ಮೂಲದ ಮಲಪ್ಪುರಂ ಜಿಲ್ಲೆಯ ಯಡಪಾಡ್​ ಗ್ರಾಮದವರೆಂದು ತಿಳಿದುಬಂದಿದೆ.

ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಬಾಲಕಿಯು ಕುಟುಂಬ ಸಮೇತ ಚಾಮರಾಜನಗರಕ್ಕೆ ಬಂದು ಕೂದಲು ಮಾರಾಟ ಮಾಡುತ್ತಿದ್ದಳು. ನಗರದ ವಾಸವಿ ವಿದ್ಯಾ ಕೇಂದ್ರದ ಮುಂಭಾಗದಲ್ಲಿ ಬಾಲಕಿಯು ಕೂದಲು ಮಾರಾಟ ಮಾಡುತ್ತಿದ್ದಳು. ಈ ವೇಳೆ ಕಾರಿನಲ್ಲಿ ಬಂದ ನಾಲ್ವರು ಯುವಕರು ಕುಡಿದ ಮತ್ತಿನಲ್ಲಿ ಹತ್ತಿರ ಕರೆದಿದ್ದಾರೆ. ಬಳಿಕ ಬಾಲಕಿಗೆ ಚಾಕೊಲೇಟ್ ನೀಡಿ, ಊಟ ಕೊಡಿಸುತ್ತೇನೆ ಎಂದು ಪುಸಲಾಯಿಸಿ ಹೇಳಿ ಕಾರಿನಲ್ಲಿ ಅಪಹರಿಸಿದ್ದಾರೆ.

ಈ ವೇಳೆ ಕೊಳ್ಳೇಗಾಲದ ಮಧುವನಹಳ್ಳಿ ಗ್ರಾಮದಲ್ಲಿ ಸಂಚರಿಸುತ್ತಿದ್ದ ಇವರ ಕಾರು ಬೈಕ್​ವೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಗ್ರಾಮಸ್ಥರು ಕಾರನ್ನು ತಡೆದಾಗ, ನಾಲ್ವರು ಕುಡಿದ ಅಮಲಿನಲ್ಲಿ ಬಾಲಕಿಯ ಬಾಯಿಯನ್ನು ಮುಚ್ಚಿ ಕರೆದೊಯ್ಯುತ್ತಿರುವುದು ಕಂಡು ಬಂದಿದೆ. ತಕ್ಷಣ ಬಾಲಕಿ ಗ್ರಾಮಸ್ಥರನ್ನು ಕಂಡು ನನ್ನನ್ನು ಅಪಹರಣ ಮಾಡುತ್ತಿದ್ದಾರೆ ಎಂದು ಜೋರಾಗಿ ಅಳಲು ಆರಂಭಿಸಿದ್ದಾಳೆ. ಬಳಿಕ ಗ್ರಾಮಸ್ಥರು ನಾಲ್ವರನ್ನೂ ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ನಂತರ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ

Last Updated : Jan 3, 2024, 3:55 PM IST

ABOUT THE AUTHOR

...view details