ಚಾಮರಾಜನಗರ:ಕಬಿನಿ ಮತ್ತು ಕೆಆರ್ಎಸ್ ಜಲಾಶಯದ ಹೊರಹರಿವು ಹೆಚ್ಚಾದ್ದರಿಂದ ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.
ಕೊಳ್ಳೇಗಾಲದಲ್ಲಿ ಕಾವೇರಿ ಆರ್ಭಟ... ದಾಸನಪುರ ಗ್ರಾಮ ಸಂಪೂರ್ಣ ಜಲಾವೃತ - flood news of chamrajnagar
ಕಬಿನಿ ಮತ್ತು ಕೆಆರ್ಎಸ್ ಜಲಾಶಯದ ಹೊರಹರಿವು ಹೆಚ್ಚಾದ್ದರಿಂದ ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ವೆಸ್ಲಿ ಸೇತುವೆ ಈ ಬಾರಿಯೂ ಮತ್ತೆ 15 ಮೀಟರ್ನಷ್ಟು ಭಾಗ ಕುಸಿದು ಕಾವೇರಿ ಪಾಲಾಗಿದೆ.
ಕೊಳ್ಳೇಗಾಲದಲ್ಲಿ ಕಾವೇರಿ ಆರ್ಭಟ..ದಾಸನಪುರ ಗ್ರಾಮ ಸಂಪೂರ್ಣ ಜಲಾವೃತ
ದಾಸನಪುರ ಗ್ರಾಮದ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಕೊಳ್ಳೇಗಾಲದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಲಯದಲ್ಲಿ ತಾತ್ಕಾಲಿಕ ನೆರೆ ಪರಿಹಾರ ಕೇಂದ್ರ ತೆರೆದು, ಸಂತ್ರಸ್ತರನ್ನ ಸ್ಥಳಾಂತರಿಸಲಾಗಿದೆ. ಕಾವೇರಿ ಆರ್ಭಟಕ್ಕೆ ಕಳೆದ ಬಾರಿ ಕೊಚ್ಚಿ ಹೋಗಿದ್ದ ವೆಸ್ಲಿ ಸೇತುವೆ, ಈ ಬಾರಿಯೂ ಮತ್ತೆ 15 ಮೀಟರ್ನಷ್ಟು ಭಾಗ ಕುಸಿದು ಕಾವೇರಿ ಪಾಲಾಗಿದೆ.
ಇನ್ನು, ಹಳೇ ಹಂಪಾಪುರ ಮತ್ತು ಹರಳೆ ಗ್ರಾಮಗಳು ಜಲಾವೃತ ಭೀತಿ ಎದುರಿಸುತ್ತಿದ್ದು, ಯಾವುದೇ ಅವಘಡಗಳು ಆಗದಂತೆ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ.