ಕರ್ನಾಟಕ

karnataka

ETV Bharat / state

ಕರ್ನಾಟಕ ಬಂದ್​ಗೆ ಕೊಳ್ಳೇಗಾಲ ಸಂಪೂರ್ಣ ಸ್ತಬ್ಧ - ಕರ್ನಾಟಕ ಬಂದ್

ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡಿಯುವಂತೆ ಅಗ್ರಹಿಸಿ ಕರೆ ನೀಡಿರುವ ಕರ್ನಾಟಕ ಬಂದ್​ಗೆ ಕೊಳ್ಳೇಗಾಲ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ.

kollegal
ಕರ್ನಾಟಕ ಬಂದ್​ಗೆ ಕೊಳ್ಳೇಗಾಲ ಪಟ್ಟಣ ಸಂಪೂರ್ಣ ಸ್ತಬ್ಧ

By

Published : Sep 28, 2020, 9:09 AM IST

ಕೊಳ್ಳೇಗಾಲ: ಭೂ ಸುದಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ 8 ವಿವಿಧ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ‌ ಬಂದ್​ಗೆ ಕೊಳ್ಳೇಗಾಲ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ. ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು ಸ್ಥಗಿತವಾಗಿದೆ.

ಕರ್ನಾಟಕ ಬಂದ್​ಗೆ ಕೊಳ್ಳೇಗಾಲ ಪಟ್ಟಣ ಸಂಪೂರ್ಣ ಸ್ತಬ್ಧ

ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್, ಡಾ. ರಾಜ್ ಕುಮಾರ್ ರಸ್ತೆ, ಡಾ. ವಿಷ್ಣುವರ್ಧನ್ ರಸ್ತೆ, ಚೌಡೇಶ್ವರಿ ರಸ್ತೆ ಮುಖ್ಯ ಹೆದ್ದಾರಿಯಲ್ಲಿ ತೆರೆಯಬೇಕಾದ ಅಂಗಡಿಗಳು, ಮಳಿಗೆಗಳು ಮುಚ್ಚಿವೆ. ಇನ್ನು ಆಟೋ, ಲಾರಿ ಚಾಲಕರು, ಟ್ಯಾಕ್ಸಿ ಮಾಲೀಕರ ಸಂಘಟನೆಗಳು ಬಂದ್​ಗೆ ಸಹಕಾರ‌ ನೀಡಿವೆ.

ಎಂದಿನಂತೆ ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಔಷಧ ಅಂಗಡಿಗಳು ತೆರೆದಿದ್ದವು. ಪೆಟ್ರೋಲ್ ಬಂಕ್​ಗಳು ಬಂದ್ ಆಗಿವೆ. ರಸ್ತೆಗಿಳಿದ ಕೆಲವು ಸರ್ಕಾರಿ ಬಸ್​ಗಳು ಜನರಿಲ್ಲದೆ ಪುನಃ ಡಿಪೋ ಸೇರಿದವು. ಆರ್.ಎಂ.ಸಿ ಬಂದ್ ಆಗಿದ್ದು, ರೈತರ ಚಟುವಟಿಕೆ ಸ್ಥಗಿತವಾಗಿತ್ತು. ಬೆಳ್ಳಂಬೆಳ್ಳಗೆ ರಸ್ತೆಗಿಳಿದ ರೈತ ಮುಖಂಡರು ಬೈಕ್​ಗಳಲ್ಲಿ ಪಟ್ಟಣದೊಳಗೆ ರೌಂಡ್ ನಡೆಸಿದರು‌.

ABOUT THE AUTHOR

...view details