ಕರ್ನಾಟಕ

karnataka

ETV Bharat / state

ನಟಿ ರಚಿತಾರಾಮ್ FIRST NIGHT ಹೇಳಿಕೆಗೆ ಆಕ್ರೋಶ: ಕ್ಷಮೆಯಾಚನೆಗೆ ಕನ್ನಡ ಕ್ರಾಂತಿದಳ ಆಗ್ರಹ - ನಟಿ ರಚಿತಾ ರಾಮ್​​ ಅವರ First night ಹೇಳಿಕೆಗೆ ಬಹಿರಂಗ ಕ್ಷಮೆ

ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಚಿತ್ರಗಳಲ್ಲಿ ನಟಿಸಿ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯ ಪ್ರತೀಕವಾಗಿ ಅಭಿನಯಿಸಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಇತಿಹಾಸವನ್ನೇ ಅರಿಯದೆ ನಿನ್ನೆ, ಮೊನ್ನೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಚಿತಾರಾಮ್( Rachita Ram) ಅಸಭ್ಯವಾಗಿ ಮಾಡಿನಾಡಿ ಚಿತ್ರರಂಗದ ಇತಿಹಾಸಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಕಿಡಿಕಾರಿದರು..

ಕ್ಷಮೆಯಾಚನೆಗೆ ಕನ್ನಡ ಕ್ರಾಂತಿದಳ ಆಗ್ರಹ
ಕ್ಷಮೆಯಾಚನೆಗೆ ಕನ್ನಡ ಕ್ರಾಂತಿದಳ ಆಗ್ರಹ

By

Published : Nov 12, 2021, 5:30 PM IST

Updated : Nov 12, 2021, 7:15 PM IST

ಚಾಮರಾಜನಗರ :ನಟಿ ರಚಿತಾ ರಾಮ್​​ ಅವರು First night ಹೇಳಿಕೆಗೆ ಬಹಿರಂಗ ಕ್ಷಮೆ ಕೇಳಬೇಕು. ಅಷ್ಟೇ ಅಲ್ಲದೇ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕೆಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ, ಚಿತ್ರನಟ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಟಿ ರಚಿತಾರಾಮ್ ಅವರು ಇತ್ತೀಚಿಗೆ ನಡೆದ ಲವ್ ಯೂ ರಚ್ಚು ಚಿತ್ರದ ಸುದ್ದಿಗೋಷ್ಠಿಯಲ್ಲಿ ಕನ್ನಡ ನಾಡಿನ ಸಂಸ್ಕೃತಿಗೆ ಧಕ್ಕೆಯಾಗುವ ರೀತಿ ನೀಡಿರುವ ಹೇಳಿಕೆಗೆ ಕನ್ನಡ ಕ್ರಾಂತಿದಳ ಮತ್ತು ರಾಜ್ಯಾದ್ಯಂತ ಇರುವ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ ಎಂದರು.

ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಪರಂಪರೆಯಿದೆ. ಡಾ.ರಾಜ್​​​ಕುಮಾರ್​ ಹಾಕಿಕೊಟ್ಟಿರುವ ಭವ್ಯ ಬುನಾದಿಯನ್ನು ಈವರೆಗೂ ಮುಂದುವರೆಸಿಕೊಂಡು ಬರಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಹಿರಿಯರಾದ ಕಲ್ಪನಾ, ಜಯಂತಿ, ಭಾರತಿ, ಆರತಿ, ಲೀಲಾವತಿ, ಮಾಲಾಶ್ರೀ, ಶೃತಿ, ತಾರಾ ಸೇರಿದಂತೆ ಇನ್ನು ಅನೇಕ ನಟಿಯರು ಗೌರಯುತವಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ.

ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಚಿತ್ರಗಳಲ್ಲಿ ನಟಿಸಿ ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯ ಪ್ರತೀಕವಾಗಿ ಅಭಿನಯಿಸಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಇತಿಹಾಸವನ್ನೇ ಅರಿಯದೆ ನಿನ್ನೆ, ಮೊನ್ನೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಚಿತಾರಾಮ್ ಅಸಭ್ಯವಾಗಿ ಮಾಡಿನಾಡಿ ಚಿತ್ರರಂಗದ ಇತಿಹಾಸಕ್ಕೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಕಿಡಿಕಾರಿದರು.

ಈ ಹಿಂದೆ ಐ ಲವ್ ಯೂ ಚಿತ್ರದಲ್ಲಿ ಅಶ್ಲೀಲವಾಗಿ ನಟಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಚಿತ್ರದಲ್ಲಿಯೂ ಸಹ ಅಶ್ಲೀಲ ದೃಶ್ಯ ಕಂಡು ಬಂದಿದ್ದು, ಇವರ ಅವಿವೇಕಿತನಕ್ಕೆ ಸಾಕ್ಷಿಯಾಗಿದೆ. ಕನ್ನಡ ನಾಡಿನಲ್ಲಿ ಜನಿಸಿರುವ ವೀರ ವನಿತೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದೇವಿ, ಅಕ್ಕಮಹಾದೇವಿ, ಒನಕೆ ಓಬವ್ವ, ರಾಣಿ ಅಬ್ಬಕ್ಕ ದೇವಿ, ಸಾಲುಮರದ ತಿಮ್ಮಕ್ಕ, ಪಾರ್ವತಮ್ಮ ರಾಜುಕುಮಾರ್ ಇನ್ನೂ ಅನೇಕ ಮಹಿಳೆಯರು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಕರ್ನಾಟಕದ ಕೀರ್ತಿ ಪತಾಕೆ ಎತ್ತಿ ಹಿಡಿದಿದ್ದಾರೆ. ಇಂತಹ ಭೂಮಿಯಲ್ಲಿ ಈ ನಟಿ ಜನಿಸಿರುವುದೇ ದುರ್ದೈವವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಚಲನಚಿತ್ರ ವಾಣಿಜ್ಯ ಮಂಡಳಿಯು ರಚಿತಾರಾಮ್ ಅಸಭ್ಯ ಹೇಳಿಕೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಅವರಿಗೆ ನಿಷೇಧ ಹೇರಬೇಕು. ಇದರೊಟ್ಟಿಗೆ ನಟಿ ಬಹಿರಂಗವಾಗಿ ಕ್ಷಮೆಯಾಚಿಸದಿದ್ದರೆ ಲವ್ ಯೂ ರಚ್ಚು ಚಿತ್ರವನ್ನು ಕರ್ನಾಟಕದ ಯಾವುದೇ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಅವಕಾಶ ಕೊಡದೇ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

('ಲವ್‌ ಯೂ ರಚ್ಚು' ಚಿತ್ರದಲ್ಲಿ ಪಾತ್ರಕ್ಕನುಗುಣವಾಗಿ ನಟಿಸಿದ್ದೇನೆ: ರಚಿತಾ ರಾಮ್)

Last Updated : Nov 12, 2021, 7:15 PM IST

ABOUT THE AUTHOR

...view details