ಚಾಮರಾಜನಗರ: ಸತತವಾಗಿ ಸುರಿದ ಮಳೆಗೆ ಕಬಿನಿ ನಾಲೆ ಒಡೆದು ಗ್ರಾಮಕ್ಕೆ ನೀರು ನುಗ್ಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ನಡೆದಿದೆ.
ಕಬಿನಿ ನಾಲೆ ಒಡೆದು ಗ್ರಾಮಕ್ಕೆ ನುಗ್ಗಿದ ನೀರು: ಎಂಜಿನಿಯರ್ಗಳ ನಿರ್ಲಕ್ಷ್ಯ ಸೃಷ್ಟಿಸಿದ ಅವಾಂತರ - latest kabini channel news
ಕಬಿನಿ ನಾಲೆ ಒಡೆದು ಗ್ರಾಮಕ್ಕೆ ನೀರು ನುಗ್ಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ನಡೆದಿದೆ. ಈ ಮೊದಲೇ ಕಬಿನಿ ನಾಲೆಯ ದುಸ್ಥಿತಿ ಬಗ್ಗೆ ಗ್ರಾಮಸ್ಥರು ಎಂಜಿನಿಯರ್ಗಳಿಗೆ ದೂರು ನೀಡಿದರೂ ಸಹ ಎಚ್ಚೆತ್ತುಕೊಳ್ಳದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ.
ಕಬಿನಿ ನಾಲೆ ಒಡೆದು ಗ್ರಾಮಕ್ಕೆ ನುಗ್ಗಿದ ನೀರು: ನಿರ್ಲಕ್ಷ್ಯ ಸೃಷ್ಟಿಸಿದ ಅವಾಂತರ
ಗ್ರಾಮ ಭಾಗಶಃ ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಅಲ್ಲದೇ ಕೆಲವು ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಎರಡು ತಿಂಗಳ ಹಿಂದೆಯೇ ಕಬಿನಿ ನಾಲೆಯ ದುಸ್ಥಿತಿ ಬಗ್ಗೆ ಗ್ರಾಮಸ್ಥರು ಎಂಜಿನಿಯರ್ಗಳಿಗೆ ದೂರು ನೀಡಿದರೂ ಸಹ ಎಚ್ಚೆತ್ತುಕೊಳ್ಳದಿರುವುದು ಈ ಅವಾಂತರಕ್ಕೆ ಕಾರಣವಾಗಿದೆ.
ಇಂದು ಸ್ಥಳಕ್ಕೆ ಹನೂರು ಶಾಸಕ ಆರ್.ನರೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದು ಆದಷ್ಟು ಬೇಗ ನಾಲೆಯನ್ನು ಸರಿಪಡಿಸಿ, ರೈತರಿಗಾಗಿರುವ ಬೆಳೆ ಹಾನಿಗೆ ತಕ್ಷಣ ಪರಿಹಾರ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.