ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಿಂದ ಇಂಡಿ ಬಸಪ್ಪನ ದೇವಸ್ಥಾನಕ್ಕೆ ತೆರಳುತ್ತಿದ್ದ ಜೀಪ್ವೊಂದು ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಮಲೆಮಹದೇಶ್ವರ ಬೆಟ್ಟದ ಕಣಿವೆಗೆ ಉರುಳಿದ ಜೀಪ್.. ಓರ್ವ ಸಾವು, ಹಲವರಿಗೆ ಗಾಯ - ಕಣಿವೆಗೆ ಉರುಳಿದ ಜೀಪ್
ಪಾಲಾರ್ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಬೆಟ್ಟದಿಂದ ಕಣಿವೆಗೆ ಉರುಳಿದೆ. ಇದನ್ನು ಕಂಡ ದಾರಿಹೋಕರು ಮಲೆ ಮಹದೇಶ್ವರ ಬೆಟ್ಟ ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ರಕ್ಷಿಸಿದ್ದಾರೆ.
ಮಲೆಮಹದೇಶ್ವರ ಬೆಟ್ಟದ ಕಣಿವೆಗೆ ಉರುಳಿದ ಜೀಪ್
ಜೀಪ್ನಲ್ಲಿ ಒಟ್ಟು 10 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಘಟನೆಯಲ್ಲಿ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಿವಾಸಿ ಈರಣ್ಣ (85) ಮೃತಪಟ್ಟಿದ್ದಾರೆ. ಮಲೆಮಹದೇಶ್ವರ ಬೆಟ್ಟದ ನಿವಾಸಿಗಳಾದ ಕೆಂಪೇಗೌಡ, ಮಾದತಂಬಡಿ, ಮಾದಯ್ಯ, ಜಡೇಮಾದತಂಬಡಿ, ಹುಚ್ಚಯ್ಯ ನಾಗ, ಪುಟ್ಟಸ್ವಾಮಿ, ಮಾದಯ್ಯ, ಮಹೇಶ್, ಶಾಂತಮ್ಮ, ಗಿರಿಜಮ್ಮ ಸೇರಿ ಹಲವರು ಗಾಯಗೊಂಡಿದ್ದಾರೆ.
ಪಾಲಾರ್ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಬೆಟ್ಟದಿಂದ ಕಣಿವೆಗೆ ಉರುಳಿದೆ. ಇದನ್ನು ಕಂಡ ದಾರಿಹೋಕರು ಮ. ಬೆಟ್ಟ ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ರಕ್ಷಿಸಿದ್ದಾರೆ.