ಚಾಮರಾಜನಗರ: ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಜೀಪ್ ಡಿಕ್ಕಿ ಹೊಡೆದು ಓರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗೇಟ್ ಬಳಿ ನಡೆದಿದೆ.
ಕೆಟ್ಟು ನಿಂತಿದ್ದ ಲಾರಿಗೆ ಜೀಪ್ ಡಿಕ್ಕಿ: ಓರ್ವ ಸಾವು - accidemt at chamarajanagar
ಕೆಟ್ಟು ನಿಂತಿದ್ದ ಲಾರಿಗೆ ಜೀಪ್ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟು, ಮತ್ತೋರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗೇಟ್ ಬಳಿ ನಡೆದಿದೆ.
ಕೆಟ್ಟುನಿಂತಿದ್ದ ಲಾರಿಗೆ ಹಿಂಬಂದಿಯಿಂದ ಜೀಪ್ ಡಿಕ್ಕಿ
ತಮಿಳುನಾಡಿನ ಗೂಡಲೂರಿನ ಗುತ್ತಿಗೆದಾರ ಲಾರೆನ್ಸ್ (53) ಮೃತ ದುರ್ದೈವಿ. ಗುಂಡ್ಲುಪೇಟೆ ಕಡೆ ಬರುತ್ತಿದ್ದ ವೇಳೆ ನಿಂತಿದ್ದ ಲಾರಿಗೆ ಕಾಣದೇ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಜೀಪು ಚಲಾಯಿಸುತ್ತಿದ್ದ ವರ್ಗೀಸ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.