ಚಾಮರಾಜನಗರ: ಗಣಪತಿ ನಿಮಜ್ಜನ ಮೆರವಣಿಗೆಗೆ ಅವಕಾಶ ನೀಡದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರನ್ನು ತಲೆಹರಟೆ, ಅವಿವೇಕಿ ಎಂದು ಹಿಂದೂ ಸಂಘಟನೆ ಮುಖಂಡ ಜಗದೀಶ್ ಕಾರಂತ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ವಿದ್ಯಾಗಣಪತಿ ಮಂಡಲಿ ಪ್ರತಿಷ್ಠಾಪಿಸಿರುವ 'ಭೂ ರಕ್ಷ ಗಣಪತಿ' ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಕೆಲ ತರಹರಟೆಗಳು ಇರುತ್ತವೆ. ಅವುಗಳಿಗೆ ಕಾರ್ಯಕ್ರಮದ ಮಹತ್ವದ ಬಗ್ಗೆ ಗಂಧ-ಗಾಳಿ ಗೊತ್ತಿರುವುದಿಲ್ಲ. ತಿಳಿದುಕೊಳ್ಳುವ ಮನಸ್ಥಿತಿ, ಬುದ್ಧಿವಂತಿಕೆಯೂ ಇರುವುದಿಲ್ಲ ಎಂದು ನಿಮಜ್ಜನ ಮೆರವಣಿಗೆ ನಡೆಸಲು ಅವಕಾಶ ಕೊಡದಿದ್ದಕ್ಕೆ ಜಿಲ್ಲಾಧಿಕಾರಿ ವಿರುದ್ಧ ಕಾರಂತ್ ಕಿಡಿಕಾರಿದರು.