ಚಾಮರಾಜನಗರ :ಪ್ರತಿಭಟಿಸುವುದು, ಬೇಡಿಕೆ ಇಡುವುದು ಜನರ ಹಕ್ಕು. ಆದರೆ, ನಾಳೆಯ ಬಂದ್ ಶಾಂತಿಯುತವಾಗಿರಲಿ ಎಂದು ಸಚಿವ ಸುರೇಶ್‌ಕುಮಾರ್ ಕರ್ನಾಟಕ ಬಂದ್ ಕುರಿತು ಪ್ರತಿಕ್ರಿಯಿಸಿದರು.
ಪ್ರತಿಭಟಿಸುವುದು ಜನರ ಹಕ್ಕು.. ಆದರೆ, ಅದು ಶಾಂತಿಯುತವಾಗಿರಲಿ- ಸಚಿವ ಸುರೇಶ್‌ಕುಮಾರ್ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಾಮಾನ್ಯ ಜನರ ಬದುಕಿಗೆ ತೊಂದರೆಯಾಗದಂತೆ, ಆಸ್ತಿಪಾಸ್ತಿಗೆ ನಷ್ಟವಾಗದಂತೆ, ಯಾರಿಗೂ ಸಮಸ್ಯೆಯಾಗದಿರುವಂತೆ ಜವಾಬ್ದಾರಿ ತೆಗೆದುಕೊಂಡು ಹೋರಾಟ ಮಾಡಲಿ ಎಂದರು.
ಈಗಾಗಲೇ ಸಿಎಂ ಯಡಿಯೂರಪ್ಪ ರೈತ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಭೂಸುಧಾರಣೆ ಕಾಯ್ದೆ ಬಗ್ಗೆ ಸದನದಲ್ಲಿ ಚರ್ಚೆಯಾಗಿದೆ. ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಇದೇ ರೀತಿಯ ಭಾವನೆ ವ್ಯಕ್ತಪಡಿಸಿದ್ದಾರೆ ಎಂದರು.
ಕೊರೊನಾ ಲಾಕ್ಡೌನ್ ನೆಪದಲ್ಲಿ ಕಾಯ್ದೆ ಜಾರಿಗೆ ತಂದಿಲ್ಲ. ರೈತರ ಪ್ರಗತಿಗೆ, ಆದಾಯ ದ್ವಿಗುಣಕ್ಕೆ ಕಾಯ್ದೆ ಜಾರಿಗೆ ತರಲಾಗಿದೆ. ಕಾಂಗ್ರೆಸ್‌ನವರು ಅವಿಶ್ವಾಸ ತಂದು ಅದು ಬಿದ್ದುಹೋದ ಬಳಿಕ ಸರ್ಕಾರದ ಮೇಲೆ ವಿಶ್ವಾಸ ಜಾಸ್ತಿಯಾಗಿದೆ ಎಂದು ಅವರು ತಿಳಿಸಿದರು.