ಕರ್ನಾಟಕ

karnataka

ETV Bharat / state

ಲಾಟರಿ ಹೊಡೆದು ಸಿಎಂ ಆದ ಸಿದ್ದುಗೆ 'ಧಮ್' ಅನ್ನೋಕೆ ಯೋಗ್ಯತೆಯಿಲ್ಲ.. ಸಚಿವ ಕೆಎಸ್‌ಈ ವಾಗ್ದಾಳಿ - ಕೃಷ್ಣಬೈರೇಗೌಡ ವಿರುದ್ಧ ಈಶ್ವರಪ್ಪ ವಾಗ್ದಾಳಿ ಸುದ್ದಿ

ಸಿದ್ದರಾಮಯ್ಯ ಮೊದಲಿನಿಂದಲೂ ಎಲ್ಲರನ್ನೂ ತುಳಿಯುತ್ತಲೇ ಬರುತ್ತಿದ್ದಾರೆ. ಸ್ವಾರ್ಥಕ್ಕೆ ಎಲ್ಲರನ್ನೂ ಬಲಿ ಪಡೆಯಲು ಯಶಸ್ವಿಯಾದರು..

ishwarappa-outrage-on-siddaramaiah
ಈಶ್ವರಪ್ಪ ವಾಗ್ದಾಳಿ

By

Published : Jun 20, 2020, 2:40 PM IST

ಚಾಮರಾಜನಗರ: ಲಾಟರಿ ಹೊಡೆದಂತೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯಗೆ ಧಮ್ ಎಂದು ಹೇಳುವುದಕ್ಕೆ ಯೋಗ್ಯತೆಯಿಲ್ಲ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ವಿರುದ್ಧ ಸಚಿವ ಕೆ ಎಸ್‌ ಈಶ್ವರಪ್ಪ ವಾಗ್ದಾಳಿ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎರಡು ಭಾಗವಾಗಿದ್ದರಿಂದ ಅವರು ಸಿಎಂ ಆದರು.‌ ಅವರ ಶಕ್ತಿಯಿಂದ ಮುಖ್ಯಮಂತ್ರಿ ಆದವರಲ್ಲ ಅವರು. ಕಾಂಗ್ರೆಸ್‌ನಲ್ಲಿ ಜಾತಿ ಹೆಸರಲ್ಲಿ ಲಾಭ ಮಾಡಿಕೊಂಡು ತಾವೇ ಶಕ್ತಿವಂತ ಎಂದು ಹೇಳಿಕೊಂಡರು. ಕೊನೆಯಲ್ಲಿ ಕಾಂಗ್ರೆಸ್ ಮುಗಿಸಿದರು, ಸಿಎಂ ಪದವಿ ಕಳೆದುಕೊಂಡರು. ಧಮ್ ಇರುವ ವ್ಯಕ್ತಿ ಏಕೆ ಬಾದಾಮಿಗೆ ಓಡಿ ಹೋದರು, ಕುರುಬರಿಗೇಕೆ ಟಿಕೇಟ್ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಟಿಕೇಟ್ ತಪ್ಪಲು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕಾರಣ ಎಂಬ ಹೆಚ್‌ ವಿಶ್ವನಾಥ್ ಆರೋಪವನ್ನು ಪರೋಕ್ಷವಾಗಿ ಒಪ್ಪಿಕೊಂಡಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮೊದಲಿನಿಂದಲೂ ಎಲ್ಲರನ್ನೂ ತುಳಿಯುತ್ತಲೇ ಬರುತ್ತಿದ್ದಾರೆ. ಸ್ವಾರ್ಥಕ್ಕೆ ಎಲ್ಲರನ್ನೂ ಬಲಿ ಪಡೆಯಲು ಯಶಸ್ವಿಯಾದರು. ಅವರೆಷ್ಟು ಕುತಂತ್ರಿ ಎಂದು ಹೆಚ್ ವಿಶ್ವನಾಥ್ ಅವರಿಗೆ ಚೆನ್ನಾಗಿ ತಿಳಿದಿದೆ ಎಂದರು.
ಇದೇ ವೇಳೆ ಸಾಹಿತಿ ಕೋಟಾದಲ್ಲಿ ನಾಮನಿರ್ದೇಶನ ಸದಸ್ಯತ್ವ ಸಿಗಲಿದೆ ಎಂಬ ಅವರ ಅಪೇಕ್ಷೆ ಈಡೇರಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜಾತಿಯನ್ನು ಬಹಳ ಉದ್ಧಾರ ಮಾಡುತ್ತೇನೆ ಎನ್ನುತ್ತಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಎಷ್ಟು ಮಂದಿ ಕುರುಬರಿಗೆ ಅವರು ಟಿಕೇಟ್ ಕೊಡಿಸಿದರು. ರಾಜ್ಯಸಭೆಗೆ ಎಷ್ಟು ಮಂದಿ ಕುರುಬರನ್ನು ಕಳುಹಿಸಿದ್ದಾರೆ ಎಂದು ಪ್ರಶ್ನಿಸಿದ್ರು. ಬಿಜೆಪಿ ಕಾರ್ಯಕರ್ತರ ಪಕ್ಷ, ನಾವು ಜಾತಿಯನ್ನು ಬಳಸಿಕೊಳ್ಳುವುದಿಲ್ಲ. ಆದರೆ, ಜಾತಿ ಲಾಭ ಪಡೆಯುವುದರಲ್ಲಿ ಸಿದ್ದರಾಮಯ್ಯ ಎಕ್ಸ್​​ಪರ್ಟ್ ಎಂದು ಕುಟುಕಿದರು. ವಿಶ್ವನಾಥ್ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿರುವ ಕೃಷ್ಣ ಬೈರೇಗೌಡ ಸಚಿವರಾಗಿದ್ದವರು, ನಾಲಿಗೆ ಬಿಗಿ ಹಿಡಿದು ಮಾತನಾಡುವುದನ್ನು ಕಲಿಯಲಿ ಎಂದು ಕಿಡಿಕಾರಿದರು.

For All Latest Updates

ABOUT THE AUTHOR

...view details