ಕರ್ನಾಟಕ

karnataka

ETV Bharat / state

ಈಶ್ವರಪ್ಪ, ಮುತಾಲಿಕ್ ಭಾರತದ ತಾಲಿಬಾನಿಗಳು: ಆರ್. ಧ್ರುವನಾರಾಯಣ ಗರಂ - ಈಶ್ವರಪ್ಪ, ಮುತಾಲಿಕ್ ವಿರುದ್ಧ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ

ತ್ರಿವರ್ಣ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸುತ್ತೇವೆ ಎಂದ ಸಚಿಚ ಈಶ್ವರಪ್ಪ ಹಾಗೂ ಅವರನ್ನು ಸಮರ್ಥಿಸಿಕೊಂಡ ಪ್ರಮೋದ್ ಮುತಾಲಿಕ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಅಲ್ಲದೇ ಇವರಿಬ್ಬರೂ ಭಾರತದ ತಾಲಿಬಾನಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದ್ದಾರೆ.

R. Dhruvanarayana
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ

By

Published : Feb 17, 2022, 6:22 PM IST

ಚಾಮರಾಜನಗರ: ಆಚಾರವಿಲ್ಲದ ನಾಲಿಗೆಯ ಸಚಿವ ಈಶ್ವರಪ್ಪ ಹಾಗೂ ಅವರ ಪರ ಮಾತನಾಡಿರುವ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಇಬ್ಬರೂ ಭಾರತದ ತಾಲಿಬಾನಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿದ್ದಾರೆ.

ಚಾಮರಾಜನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವರಿಬ್ಬರೂ ನಿಜವಾದ ತಾಲಿಬಾನಿಗಳಾಗಿದ್ದಾರೆ. ತ್ರಿವರ್ಣ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಸಚಿಚ ಈಶ್ವರಪ್ಪ ಹಾಗೂ ಅವರನ್ನು ಸಮರ್ಥಿಸಿಕೊಂಡ ಪ್ರಮೋದ್ ಮುತಾಲಿಕ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ದಸ್ತಗಿರಿ ಮಾಡಬೇಕೆಂದು ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ

ಉಪಾಸಣೆ ಸಿನಿಮಾದ ಆಚಾರವಿಲ್ಲದ ನಾಲಿಗೆ-ನೀಚ ಬುದ್ಧಿಯ ಬಿಡೋ ಎಂಬ ಹಾಡನ್ನು ಉದಾಹರಿಸಿದ ಅವರು ಈಶ್ವರಪ್ಪ ಅವರದ್ದು ಆಚಾರವಿಲ್ಲದ ನಾಲಿಗೆ, ನೀಚ ನಾಲಿಗೆಯಲ್ಲಿ ಸುಗಂಧ ಬರಲ್ಲ. ಬಚ್ಚಲು ಬಾಯಲ್ಲಿ ದುರ್ಗಂಧ ಬಿಟ್ಟು ಇನ್ನೇನೂ ಇರಲ್ಲ, ಆ ರೀತಿಯ ಕೊಳಕು ಮಾತನ್ನು ಪ್ರಜಾಪ್ರಭುತ್ವತದ ದೇಗುಲ ವಿಧಾನಸೌಧದಲ್ಲಿ ಈಶ್ವರಪ್ಪ ಆಡಿದ್ದಾರೆ. ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಅವರು ವಜಾ ಆಗುವ ತನಕವೂ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದ್ದು, ಇಂದಿನಿಂದ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದರು.

ಸ್ವಯಂ ಘೋಷಿತ ದೇಶಭಕ್ತರು - ಸುಳ್ಳು ಪ್ರಕರಣಗಳು: ಬಿಜೆಪಿ ಅವರು ಸ್ವಯಂ ಘೋಷಿತ ದೇಶಭಕ್ತರು, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ 323 ದೇಶದ್ರೋಹ ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ 22 ಪ್ರಕರಣ ದಾಖಲಾಗಿವೆ. ಪತ್ರಕರ್ತರ ಮೇಲೂ ಕೇಂದ್ರ ಸರ್ಕಾರ ಸುಳ್ಳು ಪ್ರಕರಣ ದಾಖಲಿಸಿದೆ. ಆದರೆ, ರಾಷ್ಟ್ರಧ್ವಜಕ್ಕೆ ಈಶ್ವರಪ್ಪ ಅಪಮಾನ ಮಾಡಿದ್ದು, ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಹಿಜಾಬ್ ವಿವಾದ: ಕೈ ಮುಸ್ಲಿಂ ಶಾಸಕರ ಜೊತೆ ಶಿಕ್ಷಣ ಸಚಿವ ನಾಗೇಶ್ ಸೌಹಾರ್ದದ ಸಭೆ; ಮನವಿ ಪತ್ರ ಸಲ್ಲಿಕೆ

ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಅವರ ಘೋಷಣೆ ಪಾಲನೆ ಆಗುತ್ತಿಲ್ಲ. ನನ್ನ ಪ್ರಕಾರ ದೇಶಕ್ಕಿಂತ ಪಾರ್ಟಿ ಮುಖ್ಯ, ಪಾರ್ಟಿಗಿಂತ ವ್ಯಕ್ತಿ ಮುಖ್ಯ ಎಂಬ ಮನಸ್ಥಿತಿಯಲ್ಲಿದ್ದಾರೆ. ನಿಜವಾಗಲೂ ಅವರು ನುಡಿದಂತೆ ನಡೆಯುವರಾದರೇ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿ ಪ್ರಕರಣ ದಾಖಲಿಸಲಿ ಎಂದು ಸವಾಲೆಸೆದರು.

ಇದೇ ವೇಳೆ, ಡಿಕೆಶಿ ಜೈಲಿಗೆ ಹೋಗಿದ್ದರು ಎಂದು ಬಿಜೆಪಿಗರು ಹೇಳಿಕೆ ಕೊಡುತ್ತಿದ್ದಾರೆ‌. ಆದರೆ, ಅವರ ಪಾರ್ಟಿಯಲ್ಲಿ ಯಾರೂ ಜೈಲಿಗೆ ಹೋಗಿಲ್ವಾ? ಗೃಹಸಚಿವ ಅಮಿತ್ ಶಾ ಅವರೇ 2 ವರ್ಷ ಜೈಲಲ್ಲಿದ್ದರು ಎಂದು ತಿರುಗೇಟು ಕೊಟ್ಟರು‌.

For All Latest Updates

TAGGED:

ABOUT THE AUTHOR

...view details