ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಬಹುದಿನದ ಆಸೆ ಈಡೇರಿದೆ. ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತೇನೆ ಎಂದು ನೂತನ ಎಸ್ಪಿ ಟಿ.ಪಿ.ಶಿವಕುಮಾರ್ ಹೇಳಿದರು.
ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನುಗಳನ್ನು ಮೀರಿ ಅಕ್ರಮ ಚಟುವಟಿಕೆಗಳನ್ನು ನಡೆಸುವವರನ್ನು ಮಟ್ಟ ಹಾಕಲಿದ್ದು, ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕು. ಜನಸ್ನೇಹಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸಲಾಗುತ್ತದೆ. ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಟಿ.ಪಿ.ಶಿವಕುಮಾರ್ ಜಿಲ್ಲೆಯ ಬಗ್ಗೆ ಮಾತನಾಡಿದ ಅವರು, ನಾನು ತಿ.ನರಸಿಪುರ ತಾಲ್ಲೂಕಿನವನು. ಹಾಗಾಗಿ, ಈ ಜಿಲ್ಲೆಯ ಬಗ್ಗೆ ಚೆನ್ನಾಗಿ ತಿಳಿದಿದೆ. ಜಿಲ್ಲೆಯ ಬಗ್ಗೆ ಅಪಾರ ಪ್ರೀತಿ ಇದೆ. ಇಲ್ಲಿನ ಜನರು ಸುಸಂಸ್ಕೃತರು, ಸರಳ ಜೀವಿಗಳು. ನನ್ನ ಹಲವು ಸ್ನೇಹಿತರು, ಪರಿಚಯಸ್ಥರು ಇಲ್ಲಿದ್ದಾರೆ. ಚಿಕ್ಕಂದಿನಿಂದಲೇ ಈ ಜಿಲ್ಲೆಯನ್ನು ಕಂಡಿದ್ದೇನೆ. ಎಲ್ಲಾ ಭಾಗಗಳು ಗೊತ್ತಿದೆ. ಹಿಂದುಳಿದವರು, ದೀನ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚಾಮರಾಜನಗರದಲ್ಲಿ ಅಪಘಾತ ಪ್ರಕರಣಗಳನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಲಾಗುವುದು. ಟ್ರಾಫಿಕ್ ನಿಯಮಗಳು ಕುರಿತು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.
ಶಿವಕುಮಾರ್ ಅವರು 2012ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು ಹಾವೇರಿ, ಬಾಗಲಕೋಟೆ, ಹಾಸನ, ಶಿವಮೊಗ್ಗದಲ್ಲಿ ಡಿವೈಎಸ್ಪಿ, ಮಂಗಳೂರಿನಲ್ಲಿ ಎಎಸ್ಪಿ, ಬೆಳಗಾವಿಯಲ್ಲಿ ಡಿಸಿಪಿ, ಮೈಸೂರಿನಲ್ಲಿ ಎಸ್ಪಿ, ಬೆಂಗಳೂರಲ್ಲಿ ಟ್ರಾಫಿಕ್ ಡಿಸಿಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್ಪಿ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ