ಚಾಮರಾಜನಗರ: ಗುಂಡ್ಲುಪೇಟೆ ಹೊರವಲಯದ ಖಾಸಗಿ ಜಮೀನಿನಲ್ಲಿ ಕುಟುಂಬದ ನಾಲ್ವರನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ರಚನೆ ಮಾಡಲಾಗಿದೆ.
ನಾಲ್ವರಿಗೆ ಗುಂಡಿಕ್ಕಿ ಬಳಿಕ ತಾನೂ ಆತ್ಮಹತ್ಯೆ ಪ್ರಕರಣ: ತನಿಖೆಗೆ ವಿಶೇಷ ತಂಡ ರಚನೆ - Chamarajnagara DYSP Mohan
ಕುಟುಂಬದ ನಾಲ್ವರನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಗಾಗಿ ಚಾಮರಾಜನಗರ ವಿಭಾಗದ ಡಿವೈಎಸ್ಪಿ ಮೋಹನ್ ನೇತೃತ್ವದ ತನಿಖಾ ತಂಡ ರಚಿಸಲಾಗಿದೆ.
ಚಾಮರಾಜನಗರ ವಿಭಾಗದ ಡಿವೈಎಸ್ಪಿ ಮೋಹನ್ ನೇತೃತ್ವದ ತನಿಖಾ ತಂಡ ರಚಿಸಲಾಗಿದೆ. ಸಿಪಿಐ ಬಾಲಕೃಷ್ಣ, ಗುಂಡ್ಲುಪೇಟೆ ಠಾಣೆ ಪಿಎಸ್ಐ ಲತೇಶ್ ಕುಮಾರ್, ಬೇಗೂರು ಠಾಣೆ ಪಿಎಸ್ಐ ಲೋಹಿತ್, ತೆರಕಣಾಂಬಿ ಠಾಣೆ ಪಿಎಸ್ಐ ಚಿಕ್ಕರಾಜಶೆಟ್ಟಿ, 8 ಮಂದಿ ಪ್ರೊಬೆಷನರಿ ಪಿಎಸ್ಐಗಳು ತಂಡದಲ್ಲಿದ್ದಾರೆ.
ಈಗಾಗಲೇ ಗನ್ಮ್ಯಾನ್ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸಿಡಿಆರ್ ಮಾಹಿತಿ ಮತ್ತು ಎಫ್ಎಸ್ಎಲ್ ವರದಿ ಬರಬೇಕಾಗಿದೆ. ಮೃತ ಓಂ ಪ್ರಕಾಶ್ಗೆ ಬೆದರಿಕೆಗಳಿದ್ದವೆ, ಸಾಲಗಾರರ ಕಾಟವೇ ಇಲ್ಲ ಕೊಲೆ ಮಾಡಿರಬಹುದೇ ಎಂದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಈಟಿವಿ ಭಾರತಕ್ಕೆ ಉನ್ನತ ಮೂಲಗಳು ಮಾಹಿತಿ ನೀಡಿವೆ.