ಗುಂಡ್ಲುಪೇಟೆ: ಸ್ಮಶಾನದಲ್ಲಿ ಪರಿಶಿಷ್ಟ ಜಾತಿ ಮಹಿಳಯೊಬ್ಬರ ಹೆಣ ಹೂಳುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಇಲ್ಲಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ.
ಪರಿಶಿಷ್ಟ ಜಾತಿ ಮಹಿಳೆಯ ಶವಸಂಸ್ಕಾರಕ್ಕೆ ಅಡ್ಡಿ.. ಪೊಲೀಸರಿಂದ ಸಮಸ್ಯೆ ಇಥ್ಯರ್ತ - ಗುಂಡ್ಲುಪೇಟೆ
ಗ್ರಾಮದ ಮಹಿಳೆ ಭೋಗಮ್ಮ ಎಂಬುವರು ಮೃತ ಪಟ್ಟಿದ್ದರಿಂದ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಸಿದ್ದತೆ ಮಾಡಲಾಗಿತ್ತು. ಇದೇ ವೇಳೆ ಗ್ರಾಮದ ಮತ್ತೊಂದು ಗುಂಪು ಶವ ಸಂಸ್ಕಾರ ಮಾಡಲು ಅಡ್ಡಿಪಡಿಸಿದ್ದಾರೆ.
ಶವಸಂಸ್ಕಾರ
ಗ್ರಾಮದ ಮಹಿಳೆ ಭೋಗಮ್ಮ ಎಂಬುವರು ಮೃತ ಪಟ್ಟಿದ್ದರಿಂದ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಸಿದ್ದತೆ ಮಾಡಲಾಗಿತ್ತು. ಇದೇ ವೇಳೆ ಗ್ರಾಮದ ಮತ್ತೊಂದು ಗುಂಪು ಶವ ಸಂಸ್ಕಾರ ಮಾಡಲು ಅಡ್ಡಿಪಡಿಸಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ವಾದ ಪ್ರತಿವಾದಗಳು ತಾರಕಕ್ಕೇರುತ್ತಿದ್ದಂತೆ ಪೊಲೀಸರು ಹಾಗೂ ದಲಿತ ಸಂಘಟನೆಗಳು ಸ್ಥಳಕ್ಕಾಗಮಿಸಿ ಗಲಾಟೆ ತಿಳಿಗೊಳಿಸಿ ಶವ ಸಂಸ್ಕಾರ ಮಾಡಲು ಅನುವು ಮಾಡಿಕೊಟ್ಟರು. ಬಳಿಕ ಪರಿಶಿಷ್ಟ ವರ್ಗದವರು ಜಾಗದ ಸಮಸ್ಯೆ ಬಗೆಹರಿಸುವಂತೆ ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.