ಕರ್ನಾಟಕ

karnataka

By

Published : Aug 12, 2020, 2:05 PM IST

Updated : Aug 12, 2020, 4:43 PM IST

ETV Bharat / state

ಇಂದು ವಿಶ್ವ ಆನೆ ದಿನ: ನಿದ್ರೆ 4 ತಾಸು-ಆಹಾರ 20 ತಾಸು... ಇಲ್ಲಿದೆ ಆನೆ ಬಗ್ಗೆ ಕುತೂಹಲಕಾರಿ ಮಾಹಿತಿ

ಇಂದು ವಿಶ್ವ ಆನೆ ದಿನವಾಗಿದ್ದು, ಆನೆಗಳ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿಯನ್ನು ವನ್ಯಜೀವಿ ತಜ್ಞರು ನೀಡಿದ್ದಾರೆ.

ಆನೆ ಬಗ್ಗೆ ಕೂತುಹಲಕಾರಿ ಮಾಹಿತಿ
ಆನೆ ಬಗ್ಗೆ ಕೂತುಹಲಕಾರಿ ಮಾಹಿತಿ

ಚಾಮರಾಜನಗರ: ಇಂದು ವಿಶ್ವ ಆನೆ ದಿನ. ಭೂಮಿ ಮೇಲಿನ ದೊಡ್ಡ ಪ್ರಾಣಿ, ಸೂಕ್ಷ ಸಂವೇದನಾಶೀಲ, ಅಗಾಧ ನೆನಪಿನ ಶಕ್ತಿ ಇರುವ ಆನೆ ಬಗೆಗೊಂದಿಷ್ಟು ಉಪಯುಕ್ತ ಮತ್ತು ಕುತೂಹಲಕಾರಿ ಅಂಶಗಳು ಇಲ್ಲಿವೆ ನೋಡಿ.

  • ದೈತ್ಯಾಕಾರ ಹೊಂದಿರುವ ಆನೆ ಬಹಳ ಸೂಕ್ಷ್ಮ, ಸಂವೇದನೆಯ ಜೀವಿ ಜೊತೆಗೆ ಬುದ್ಧಿವಂತ ಪ್ರಾಣಿ ಕೂಡ.
  • ಆನೆಗಳಲ್ಲೀಗ ಎರಡು ಪ್ರಭೇದವಿದ್ದು, ಒಂದು ಆಫ್ರಿಕಾದ ಆನೆಗಳು ಮತ್ತೊಂದು ಏಷ್ಯಾದ ಆನೆಗಳು.
    ಆನೆ ಬಗ್ಗೆ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಅಧಿಕಾರಿಗಳು
  • ಆಫ್ರಿಕಾದ ಆನೆಗಳ ಜೀವಿತಾವಧಿ 60-70 ವರ್ಷ, ಏಷ್ಯಾ ಆನೆಗಳ ಜೀವಿತಾವಧಿ 45-55 ವರ್ಷ. ಆಫ್ರಿಕಾದ ಆನೆಗಳು 9 ಸಾವಿರ ಕೆಜಿ ತನಕವೂ ದೇಹದ ತೂಕ ಹೊಂದಿರಲಿದ್ದು, ಏಷ್ಯಾದ ಆನೆಗಳ ಸರಾಸರಿ ತೂಕ 5500 ಕೆಜಿ.
    ಆನೆ ಮತ್ತು ಆನೆ ಮರಿ
  • ಆನೆಯ ವಿಶಿಷ್ಟವಾದ ಅಂಗ ಅದರ ಸೊಂಡಿಲು‌. ಇದು 120-140 ಕೆಜಿ ತೂಗಲಿದ್ದು, 250 ಕೆಜಿವರೆಗೂ ಭಾರ ಎತ್ತುವ ಶಕ್ತಿ ಈ ಸೊಂಡಿಲಿಗಿದೆ. ಅದೇ ರೀತಿ ಒಂದೇ ಒಂದು ಹುಲ್ಲಿನ ಎಸಳನ್ನು ತೆಗೆದುಕೊಳ್ಳಬಲ್ಲುದು.
  • ಆನೆ ಹೊಂದಿರುವ ದೊಡ್ಡ ದೊಡ್ಡ ಕಿವಿಗಳ ಮೂಲಕ ತನ್ನ ದೇಹದ ಉಷ್ಣತೆ ಹೆಚ್ಚಾಗದಂತೆ ಕಾಪಾಡಿಕೊಳ್ಳುತ್ತದೆ ಎಂಬುದು ಅಚ್ಚರಿಯಾದರೂ ಸತ್ಯ.
    ಆಟವಾಡುತ್ತಿರುವ ಮರಿ ಆನೆ
  • ಆನೆ ಗಂಟೆಗೆ 40 ಕಿ.ಮೀ. ವೇಗದಲ್ಲಿ ಓಡಬಲ್ಲದು. ಮತ್ತೊಂದು ಆನೆಯ ಘೀಳಿನ ಶಬ್ದವನ್ನು ಇನ್ನೊಂದು ಆನೆ 10 ಕಿ.ಮೀ. ದೂರದಲ್ಲಿದ್ದರೂ ಗ್ರಹಿಸಬಲ್ಲದು.
  • ಆನೆಗೆ ಆಗಾಧವಾದ ನೆನಪಿನ ಶಕ್ತಿಯಿದ್ದು, ತಾಯಿಯಾನೆ ಮರಿಗೆ ವರ್ಗಾಯಿಸುತ್ತದೆ‌. ಯಾವ ಕಾಲದಲ್ಲಿ ಎಲ್ಲಿ ನೀರು ಸಿಗಲಿದೆ, ಆಹಾರ ಎಲ್ಲಿ ಸಿಗಲಿದೆ ಎಂಬುದು ಇಂದಿನ ಜಿಪಿಎಸ್​​ಗಿಂತಲೂ ಪರಿಣಾಮಕಾರಿಯಾಗಿದೆ.
    ತಾಯಿ ಆನೆ ಮಮತೆಯಲ್ಲಿ ಆನೆ ಮರಿ
  • ಆನೆಯ ಹಿಂಡಿನ ನೇತೃತ್ವ ವಹಿಸುವುದು ತಂಡದ ವಯಸ್ಸಾದ ಹೆಣ್ಣಾನೆಯಾಗಿರಲಿದೆ. ಆನೆಯ ಗರ್ಭಾವಧಿ 20-24 ತಿಂಗಳಾಗಿದ್ದು, ಎರಡು ವರ್ಷ ಹಾಲು ಕುಡಿಸುತ್ತವೆ. ಮರಿ 5 ವರ್ಷ ಆಗುವ ತನಕವೂ ಪಾಲನೆ ಮಾಡುತ್ತವೆ.
  • ಗಂಡಾನೆ ಪ್ರೌಢಾವಸ್ಥೆಗೆ ಬಂದ ಕೂಡಲೇ ಗುಂಪಿನಿಂದ ಹೊರ ಹಾಕುವ ಪದ್ಧತಿ ಆನೆಯಲ್ಲಿದೆ. ಗಂಡಾನೆ ಬೇರೆ ಆನೆಗಳೊಂದಿಗೆ ಸಂಪರ್ಕಕ್ಕೆ ಬಂದು ವಂಶ ಬೆಳೆಸಲ್ಲೆನ್ನುವ ಉದ್ದೇಶ ಇದರದ್ದು. ಒಂದು ವೇಳೆ ತನ್ನ ಸಂಬಂಧಿ ಆನೆಗಳು ಎದುರಾದರೆ ಉಭಯ ಕುಶಲೋಪರಿ ವಿಚಾರಿಸುವ ವಿಚಾರದಲ್ಲಿ ಮಾನವನನ್ನು ಹೋಲುತ್ತವೆ.
  • ಆನೆ ದಿನಕ್ಕೆ 3-4 ತಾಸಷ್ಟೇ ನಿದ್ರಿಸಲಿದ್ದು, ಉಳಿದ ವೇಳೆ ತಿನ್ನುತ್ತಾ ಇಲ್ಲಾ ಆಹಾರ ಹುಡುಕುತ್ತಾ ಇರುತ್ತದೆ‌. ನಿಂತು ಮತ್ತು ಮಲಗಿ ಆನೆ ನಿದ್ರಿಸುವುದು‌ ಮತ್ತೊಂದು ವೈಶಿಷ್ಟ್ಯ.
    ಗಜರಾಜ
  • ಒಂದು ಆನೆ ದಿನಕ್ಕೆ ಏನಿಲ್ಲವೆಂದರೂ 270-300 kg ಮೇವು ತಿನ್ನುತ್ತವೆ. 75-150 ಲೀಟರ್​​ ನೀರು ಕುಡಿಯುತ್ತದೆ.
  • ಮರಿ ಆನೆಗಳು ಪ್ರತಿದಿನ ಎರಡು ವರ್ಷದ ತನಕ 10-12 ಲೀಟರ್​​ ತಾಯಿ ಎದೆಹಾಲನ್ನು ಕುಡಿಯುತ್ತವೆ‌.
  • ಆನೆ ಬಗೆಗಿನ ಅಧ್ಯಯನ ನಡೆಸಿರುವ ಜಾಯ್ಸ್ ಪೂಲೆ ಪ್ರಕಾರ ಆನೆಯು 70 ರೀತಿಯ ಶಬ್ದ ಮಾಡಲಿದ್ದು, 160 ರೀತಿಯ ಚಿಹ್ನೆಗಳ ಮೂಲಕ ಸಂವಹನ ನಡೆಸುತ್ತವೆ.
  • ತಮ್ಮ ಗುಂಪಿನಲ್ಲಿ ಯಾವುದಾದರೂ ಒಂದು ಆನೆ ಸತ್ತರೆ ಸೊಂಡಿಲ ಮೂಲಕ ಅವುಗಳನ್ನು ಸ್ಪರ್ಶಿಸಿ ಶ್ರದ್ಧಾಂಜಲಿ ಕೋರುವುದು ಆನೆಯ ಒಂದು ವಿಶಿಷ್ಟ ವರ್ತನೆ.
    ಕಾಡಿನಲ್ಲಿ ವಿಹರಿಸುತ್ತಿರುವ ಆನೆಗಳು
  • ಆನೆ ಗಣತಿಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮಾಡಲಿದ್ದು, ಆನೆಯ ಲದ್ದಿ, ಆನೆಯ ಗುಂಪುಗಳ ಆಧಾರದ ಮೇಲೆ ಆನೆಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗುತ್ತದೆ.
  • ಕರ್ನಾಟಕದಲ್ಲಿ ಅತಿ ಹೆಚ್ಚು ಆನೆಗಳಿರುವುದು ಮೈಸೂರು ಭಾಗದಲ್ಲಿ.
  • ಆನೆ ಬಗೆಗೆ ಪುರಾಣಗಳಲ್ಲೂ ಉಲ್ಲೇಖ. ಗಜಮುಖನಾಗಿರುವ ಗಣಪತಿ ಹಿಂದೂ ಧರ್ಮದ ಆರಾಧ್ಯ ದೈವ.
  • ಯುದ್ಧಗಳಿಗೆ ಬಳಕೆ, ಭಾರದ ವಸ್ತುಗಳ ರವಾನೆಗೂ ಆನೆಯ ಸಹಾಯ, ದೇಗುಲ, ವಿಶ್ವವಿಖ್ಯಾತ ದಸರಾದಲ್ಲಿ ಆನೆ ಅವಶ್ಯ.
    ತಾಯಿ ಆನೆ ಮಮತೆಯಲ್ಲಿ ಆನೆ ಮರಿ
  • ಮಾಹಿತಿ: ಏಡುಕುಂಡಲು- ಮಹದೇಶ್ವರ ವನ್ಯಜೀವಿಧಾಮ ಡಿಎಫ್ಒ, ಕಾಂತರಾಜು ಪುಣಜನೂರು ಆರ್​ಎಫ್ಒ, ಚಿರಾಗ್ ವನ್ಯಜೀವಿ ತಜ್ಞ
  • ಫೋಟೋಗಳು: ವೇಣುಗೋಪಾಲ್ ಮತ್ತು ಅಂಜನಾ ಸುಜಯಕಾಂತ್
Last Updated : Aug 12, 2020, 4:43 PM IST

ABOUT THE AUTHOR

...view details