ಕರ್ನಾಟಕ

karnataka

ETV Bharat / state

ಗ್ರಾಮ ಪಂಚಾಯತ್‌ ಮೇಲೆ ಹರಿದ ತ್ರಿವರ್ಣ ಧ್ವಜ ಹಾರಾಟ.. - ಗ್ರಾಮ ಪಂಚಾಯ್ತಿ ಮುಂದೆ ಹರಿದ ತ್ರಿವರ್ಣ ಧ್ವಜ ಹಾರಾಟ

ತಿಂಗಳುಗಳಿಂದ ಹರಿದ ರಾಷ್ಟ್ರಧ್ವಜವನ್ನೇ ಗ್ರಾಪಂ‌ ಸಿಬ್ಬಂದಿ ಹಾರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ರಾಷ್ಟ್ರಧ್ವಜಕ್ಕೆ ಅಪಮಾನವೆಂದು ತಿಳಿದೂ ಈ ಅಪಚಾರ ಎಸಗಿದ್ದಾರೆ ಎನ್ನಲಾಗಿದೆ..

insult towards national flag
ಗ್ರಾಮ ಪಂಚಾಯ್ತಿ ಮೇಲೆ ಹರಿದ ತ್ರಿವರ್ಣ ಧ್ವಜ ಹಾರಾಟ

By

Published : Jul 5, 2020, 3:49 PM IST

ಚಾಮರಾಜನಗರ:‌ ಸರ್ಕಾರ ಎಲ್ಲಾ ಗ್ರಾಮ ಪಂಚಾಯತ್‌ ಕಚೇರಿಗಳ ಮುಂದೆ ಪ್ರತಿದಿನ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಬೇಕೆಂಬ ನಿಯಮ ಜಾರಿಗೆ ತಂದಿದೆ. ಈ ನಿಯಮ ಜಾರಿಯಾದ ಮೇಲೆ ರಾಷ್ಟ್ರಧ್ವಜ್ಕಕೆ ಸಂಬಂಧಿಸಿದ ಅವಾಂತರ, ಅವಮಾನಕರ ಘಟನೆಗಳು ನಡೆಯುತ್ತಿವೆ.

ಧ್ಬಜ ಸಂಹಿತೆ ಎಂಬುದೊಂದಿದೆ ಅನ್ನೋದನ್ನೇ ಮರೆತು, ತಿಂಗಳುಗಳಿಂದ ಹರಿದ ಬಾವುಟವನ್ನೇ ಹಾರಿಸುತ್ತಿರುವ ಘಟನೆ ಕೊಳ್ಳೇಗಾಲ ತಾಲೂಕಿನ‌ ಮಧುವನಹಳ್ಳಿ ಗ್ರಾಮ ಪಂಚಾಯತ್‌ ನಲ್ಲಿ ನಡೆದಿದೆ.

ಗ್ರಾಮ ಪಂಚಾಯತ್ ಮೇಲೆ ಹರಿದ ತ್ರಿವರ್ಣ ಧ್ವಜ ಹಾರಾಟ..

ತಿಂಗಳುಗಳಿಂದ ಹರಿದ ರಾಷ್ಟ್ರಧ್ವಜವನ್ನೇ ಗ್ರಾಪಂ‌ ಸಿಬ್ಬಂದಿ ಹಾರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ರಾಷ್ಟ್ರಧ್ವಜಕ್ಕೆ ಅಪಮಾನವೆಂದು ತಿಳಿದೂ ಈ ಅಪಚಾರ ಎಸಗಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿ‌ ಗ್ರಾಮ ಪಂಚಾಯತ್‌ನಲ್ಲಿ ರಾಷ್ಟ್ರಧ್ವಜವನ್ನು ಪದೇಪದೆ ಉಲ್ಟಾ ಹಾರಿಸಿದ್ದ ಪ್ರಸಂಗ ನಡೆದಿತ್ತು. ಆದರೆ, ಜಿಲ್ಲಾಡಳಿತ ರಾಷ್ಟ್ರಧ್ವಜಕ್ಕೆ ಅಪಮಾನವಾದ ಘಟನೆ ನಡೆದರೂ ಖಡಕ್ ತೀರ್ಮಾನ ಕೈಗೊಳ್ಳದಿರುವುದರಿಂದ ಈ ರೀತಿ ಪ್ರಕರಣ ಮರು ಕಳಿಸುತ್ತಿವೆ.

ABOUT THE AUTHOR

...view details