ಗುಂಡ್ಲುಪೇಟೆ (ಚಾಮರಾಜನಗರ):ತಾಲೂಕಿನ ಬರಗಿ ಅರಣ್ಯದ ಎಎನ್ಎಫ್ ಕ್ಯಾಂಪ್ ವಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳಲ್ಲಿರುವ ನಿರುದ್ಯೋಗಿ ಯುುವಕರಿಗೆ ಉದ್ಯೋಗ ಮಾಹಿತಿ ಕಿರು ಹೊತ್ತಿಗೆಯನ್ನು ಉಚಿತವಾಗಿ ನೀಡಲಾಯಿತು.
ನಕ್ಸಲ್ ನಿಗ್ರಹ ದಳದ ಪೊಲೀಸ್ ಅಧೀಕ್ಷಕರು ಹಾಗೂ ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರ ಸಹಯೋಗದೊಂದಿಗೆ ಬರಗಿ ಎಎನ್ಎಫ್ ಕ್ಯಾಂಪ್ ವ್ಯಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳಲ್ಲಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ಅಗ್ನಿಶಾಮಕ ದಳದ ನೇಮಕಾತಿ, ಪೊಲೀಸ್ ಇಲಾಖೆ ನೇಮಕಾತಿ, ಅರಣ್ಯ ಇಲಾಖೆ ನೇಮಕಾತಿಗಳ ಬಗ್ಗೆ ಯುವಕರಿಗೆ ಅರ್ಜಿ ಹಾಕುವಂತೆ ತಿಳಿಸಿ, ಅಧಿಸೂಚನೆಯ ಕರಪತ್ರವನ್ನು ಯುವಕರಿಗೆ ಹಂಚಲಾಯಿತು.