ಕರ್ನಾಟಕ

karnataka

ETV Bharat / state

ರಾಮನ ಬಾಣಕ್ಕೆ ಎರಡು ಹೋಳಾದ ಬೆಟ್ಟ: ಇಲ್ಲಿ ಶ್ರೀರಾಮನ ಪಾದವೇ ದೇಗುಲ - ಚಾಮರಾಜನಗರ

ರಾಮ ಬಿಟ್ಟ ಬಾಣಕ್ಕೆ ಎರಡಾದ ಬೆಟ್ಟ ಇಂದಿಗೂ ರಾಮನ ಕಿಂಡಿ ಎಂದೇ ಹೆಸರಾಗಿದೆ. ರಾಮ ಬಲ(ಶಕ್ತಿ) ಬಿಟ್ಟ ಸ್ಥಳವನ್ನು ರಾಮನ ಪಾದವೆಂದೂ ಕರೆಯುತ್ತಾರೆ.

ramapaada temple
ರಾಮರಪಾದ ದೇಗುಲ

By

Published : Apr 21, 2021, 1:38 PM IST

ಚಾಮರಾಜನಗರ:ಜಿಲ್ಲೆಯಲ್ಲಿರಾಮನ ಪಾದವೇ ಮಂದಿರವಾಗಿ, ದೇವರ ಹೆಜ್ಜೆ ಗುರುತನ್ನು ಶ್ರದ್ಧಾ ಭಕ್ತಿಯಿಂದ ನಿತ್ಯ ಪೂಜಿಸುವ ಸ್ಥಳವೊಂದಿದೆ. ಇಲ್ಲಿ ಪಾದದ ಗುರುತಿಗೆ ನಮಸ್ಕರಿಸಿ ಬೇಡಿಕೊಂಡರೆ ಇಷ್ಟಾರ್ಥ ಸಿದ್ಧಿಸಲಿದೆ ಎಂಬ ನಂಬಿಕೆ ಭಕ್ತರದ್ದು.

ತಮಿಳುನಾಡಿನ ತಾಳವಾಡಿ ತಾಲೂಕಿನ‌ ರಾಮಪುರ ಸಮೀಪದ ಅರಣ್ಯದ ನಡುವೆ ರಾಮರಪಾದ ಎಂಬ ದೇಗುಲವಿದೆ. ವನವಾಸ ಸಮಯದಲ್ಲಿ ಶ್ರೀರಾಮ ಒಂದು ದಿನ ಇಲ್ಲಿ ಬಂದು ತಂಗಿದ್ದು, ಹೊರಡುವ ವೇಳೆ ಎದುರಾದ 'ತಲ' ಎಂಬ ರಾಕ್ಷಸನನ್ನು ಸಂಹರಿಸಲು ಹೂಡಿದ ಬಾಣ ಆತನ ತಲೆಯನ್ನು ಹಾದು ಹೋಗುವಾಗ ಅಡ್ಡ ಸಿಕ್ಕ ಬೆಟ್ಟವನ್ನು ಸೀಳಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.

ಪುರಾಣದಲ್ಲಿ ಉಲ್ಲೇಖವಾದಂತೆ ಇಲ್ಲಿನ ಬೆಟ್ಟದ ಮಧ್ಯದ ಭಾಗ ಕತ್ತರಿಸಿದಂತಿದೆ. ಬಿಲ್ಲು ಹೂಡುವಾಗ ನೆಲಕ್ಕೆ ಮಂಡಿಯೂರಿದ ಕುರುಹಾಗಿ ಇಂದಿಗೂ ಅಲ್ಲಿ ಕಪ್ಪು ಶಿಲೆಯೊಂದರಲ್ಲಿ ಕುಳಿ ಬಿದ್ದಿದೆ. ಈ ಕುಳಿಯನ್ನು ರಾಮನ ಪಾದವೆಂದು ನಿತ್ಯ ಅಗ್ರಪೂಜೆ ಸಲ್ಲಿಸಲಾಗುತ್ತದೆ.

ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ಪೂಜೆ ನಡೆಯುತ್ತಿದ್ದು ವಿವಿಧ ಭಾಗಗಳಿಂದ ರಾಮ ಭಕ್ತರು ಆಗಮಿಸುತ್ತಾರೆ. ವಿಶೇಷವೆಂದರೆ, ರಾಮ- ಸೀತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯ ಸಿದ್ದಿಗಾಗಿ ಬೇಡಿದರೆ ಆತ ಇಷ್ಟಾರ್ಥ ಸಿದ್ಧಿಸುತ್ತಾನೆ ಎನ್ನುವುದು ನಂಬಿಕೆ. ಮಕ್ಕಳಾಗದೆ ಇರುವವರು ಕೂಡ ಇಲ್ಲಿಗೆ ಬಂದು ಸಂತಾನ ಭಾಗ್ಯಕ್ಕಾಗಿ ಬೇಡಿಕೊಳ್ಳುತ್ತಾರೆ ಎನ್ನುತ್ತಾರೆ ದೊಡ್ಡಪುರ ಗ್ರಾಮದ ನಿವೃತ್ತ ಶಿಕ್ಷಕ ರಂಗರಾಜು.

ಸ್ಥಳ ಪುರಾಣದ ಬಗ್ಗೆ ಹೇಳುವ ತಾಳವಾಡಿ ಭಾಗದ ಜನ ತಮ್ಮ ಬೇಕು ಬೇಡಗಳಿಗಾಗಿ ರಾಮನ ಪಾದಕ್ಕೆ ಪೂಜೆ ಸಲ್ಲಿಸುತ್ತಾರೆ. ಕಾಡಿನ ನಡುವೆ ಇರುವ ರಾಮನ ಪಾದದ ಕುರುಹು ಈ ಭಾಗದ ಜನರ ಬಲವಾದ ನಂಬಿಕೆಗೆ ಕಾರಣವಾಗಿದೆ. ಪ್ರತಿ ಶನಿವಾರ, ರಾಮನವಮಿ ಸೇರಿದಂತೆ ಅಮಾವಾಸ್ಯೆ, ಹುಣ್ಣಿಮೆ ದಿನಗಳು ಇಲ್ಲಿನ ವಿಶೇಷ ದಿನಗಳಾಗಿವೆ.

ಆನೆಗಳು ಹಾಗೂ ಹುಲಿ ಸಂಚಾರ ಇಲ್ಲಿ ಸಾಮಾನ್ಯವಾಗಿರುವುದರಿಂದ ಏಕಾಂಗಿಯಾಗಿ ತೆರಳಲು ಮತ್ತು ಮುಂಜಾನೆ ಹಾಗೂ ಸಂಜೆ 4 ರ ಬಳಿಕ ದೇಗುಲ ಭೇಟಿ ಅಪಾಯಕಾರಿಯಾಗಿದೆ.

ABOUT THE AUTHOR

...view details