ಚಾಮರಾಜನಗರ: ಕೊರೊನಾ ಪರೀಕ್ಷೆ 48,020 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 515ಕ್ಕೆ ಇಳಿದಿದೆ. ಕಳೆದ 1 ವಾರದಿಂದ 500ರ ಸಮೀಪವೇ ಸಕ್ರಿಯ ಪ್ರಕರಣಗಳಿರುವ ಮೂಲಕ ಕೊರೊನಾ ಆತಂಕ ಕಡಿಮೆಯಾಗಿದೆ.
ಇಲ್ಲಿಯವರೆಗೆ 2771 ಸೋಂಕಿತ ಪ್ರಕರಣ ವರದಿಯಾಗಿದ್ದು, 2,200 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇವರಲ್ಲಿ, ಬರೋಬ್ಬರಿ 365 ಮಂದಿ ಹೋಂ ಐಸೋಲೇಷನ್ನಲ್ಲಿದ್ದು, ಕೋವಿಡ್ ಜಯಿಸಿದ್ದಾರೆ.