ಚಾಮರಾಜನಗರ: ಚಿರತೆಯೊಂದನ್ನು ಕಾಡುಹಂದಿಗಳು ಎಳೆದಾಡಿ ತಿನ್ನುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ತಮಿಳುನಾಡಿನ ಪಳನಿ - ಕೊಡೈಕೆನಾಲ್ ಇಲ್ಲವೇ ಆಸನೂರು - ಕೊಳ್ಳೇಗಾಲದ ರಸ್ತೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆಯಾದರೂ ನಿಖರವಾಗಿ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.
ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಚಿರತೆಯನ್ನು ಮೂರು ಕಾಡು ಹಂದಿಗಳು ನಡುರಸ್ತೆಯಲ್ಲಿ ಎಳೆದಾಡಿ ತಿನ್ನುತ್ತಿರುವುದು ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ. ವನ್ಯಜೀವಿಗಳ ಬದುಕಿನ ಮತ್ತೊಂದು ದೃಶ್ಯಕ್ಕೆ ನೆಟಿಜನ್ಸ್ ಅವಾಕ್ಕಾಗಿದ್ದಾರೆ.