ಕೊಳ್ಳೇಗಾಲ (ಚಾಮರಾಜನಗರ): ಬೈಕ್ನಲ್ಲಿ ಅಕ್ರಮವಾಗಿ ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಖದೀಮರು ಅರಣ್ಯ ಇಲಾಖೆ ಅಧಿಕಾರಿಗಳ ಕಂಡು ಬೈಕ್ ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ.
ಕಾಡು ಹಂದಿ ಮಾಂಸ ಸಾಗಾಟ: ಅಧಿಕಾರಿಗಳ ಕಂಡು ಸ್ಥಳದಲ್ಲೇ ಬೈಕ್ ಬಿಟ್ಟು ಪರಾರಿಯಾದ ಖದೀಮರು - Wild boar trafficking illegally on a bike
ಕೊಳ್ಳೇಗಾಲ ತಾಲೂಕಿನ ಸೂರಪುರ ಸಮೀಪದ ಕುಣಗಳ್ಳಿ ರಸ್ತೆ ಮಾರ್ಗವಾಗಿ ಪಟ್ಟಣದ ಕಡೆ ಸಾಗಿಸುತ್ತಿದ್ದಾಗ, ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಕಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅನುಮಾನಗೊಂಡು ಬೈಕ್ ಹಿಂಬಾಲಿಸಿದಾಗ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ.
ಕಾಡು ಹಂದಿ ಮಾಂಸ ಸಾಗಾಟ
ಇಲ್ಲಿನ ಕುಣಗಳ್ಳಿ ಗ್ರಾಮದ ರಸ್ತೆಯಲ್ಲಿ ಎಕ್ಸ್ಎಲ್ ಬೈಕ್ನಲ್ಲಿ ಅಕ್ರಮವಾಗಿ ಎರಡು ಕಾಡು ಹಂದಿ ಮಾಂಸ ಸಾಗಿಸುತ್ತಿದ್ದ ಆರೋಪಿಗಳು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಕೊಳ್ಳೇಗಾಲ ತಾಲೂಕಿನ ಸೂರಪುರ ಸಮೀಪದ ಕುಣಗಳ್ಳಿ ರಸ್ತೆ ಮಾರ್ಗವಾಗಿ ಪಟ್ಟಣದ ಕಡೆ ಸಾಗಿಸುತ್ತಿದ್ದಾಗ ಅರಣ್ಯ ಇಲಾಖೆ ಅಧಿಕಾರಿಗಳು ಬೈಕ್ ಹಿಂಬಾಲಿಸಿದ್ದಾರೆ. ಈ ವೇಳೆ ಬೈಕ್ ಅನ್ನು ಅಲ್ಲಿಯೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಕಾಡು ಹಂದಿ ಮಾಂಸ ಹಾಗೂ ಬೈಕ್ ವಶಕ್ಕೆ ಪಡೆದಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್ಎಫ್ಓ ಪ್ರವೀಣ್ ರಾಮಪ್ಪ ತಿಳಿಸಿದ್ದಾರೆ.