ಚಾಮರಾಜನಗರ :ಗಣಿಗಾರಿಕೆಗೆ ಬಳಸಲು ಅಕ್ರಮವಾಗಿ ಶೇಖರಿಸಿಟ್ಟಿದ್ದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದಲ್ಲಿ ನಡೆದಿದೆ.
ಹಿರಿಕಾಟಿ ಗ್ರಾಮದ ಮಹೇಶ್ ಬಂಧಿತ ಆರೋಪಿ. ಈತ ತನ್ನ ಮನೆ ಸಮೀಪ ಸೌದೆಗಳ ಮದ್ಯೆ ಸ್ಫೋಟಕ ಸಾಮಗ್ರಿ ಮುಚ್ಚಿಟ್ಟಿದ್ದರ ಬಗ್ಗೆ ಖಚಿತ ಮಾಹಿತಿ ಪಡೆದು ಬೇಗೂರು ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.