ಚಾಮರಾಜನಗರ: ಈರುಳ್ಳಿ ಮೂಟೆಗಳ ಮಧ್ಯದಲ್ಲಿ ಸ್ಪಿರಿಟ್ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಶುಕ್ರವಾರ ಚಾಮರಾಜನಗರ ತಾಲೂಕಿನ ಪುಣಜನೂರು ಚೆಕ್ ಪೋಸ್ಟ್ನಲ್ಲಿ ನಡೆದಿದೆ.
ಕೇರಳ ಮೂಲದ ಹರಿ ಹಾಗೂ ವಿನೋದ್ ಬಂಧಿತ ಆರೋಪಿಗಳು. ಈಚರ್ ವಾಹನದಲ್ಲಿ ಇವರು ಈರುಳ್ಳಿ ಸಾಗಿಸುವ ಸೋಗಿನಲ್ಲಿ ಸ್ಪಿರಿಟ್ ಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಚಾಮರಾಜನಗರ ಪಿಐ ಆನಂದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.