ಕರ್ನಾಟಕ

karnataka

ETV Bharat / state

ಸಾರ್ವಜನಿಕರು ಪೊಲೀಸರಾದಾಗ ಮಾತ್ರ ಅಕ್ರಮ ತಡೆ.. ಐಜಿಪಿ ವಿಪುಲ್‌ಕುಮಾರ್ - ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ

ಏಕಾಏಕಿ ಈ ಘಟನೆ ನಡೆಯಲು ಸಾಧ್ಯವಿಲ್ಲ. ಇದರಲ್ಲಿ ಎರಡು ಗುಂಪುಗಳ ನಡುವೆ ಇರುವ ವೈಷಮ್ಯ ಹಾಗೂ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ಪೊಲೀಸ್ ಇಲಾಖೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುವ ಮೂಲಕ 15 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ.

dsd
ಐ.ಜಿ.ಪಿ. ವಿಪುಲ್ ಕುಮಾರ್ ಮಾತು

By

Published : Jun 5, 2020, 9:47 PM IST

ಗುಂಡ್ಲುಪೇಟೆ : ಸಾರ್ವಜನಿಕರು ಪೊಲೀಸರಾದಾಗ ಮಾತ್ರ ಅಕ್ರಮಗಳನ್ನು ತಡೆಯಲು ಸಾಧ್ಯ ಎಂದು ದಕ್ಷಿಣ ವಲಯ ಐಜಿಪಿ ವಿಪುಲ್‌ಕುಮಾರ್ ತಿಳಿಸಿದರು.

ಐಜಿಪಿ ವಿಪುಲ್‌ಕುಮಾರ್ ಮಾತು..

ಪಟ್ಟಣದಲ್ಲಿ ರಂಜಾನ್ ಮಾರನೆಯ ದಿನ ನಡೆದ ತ್ರಿವಳಿ ಕೊಲೆ ಸಂಬಂಧ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಶಾಂತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ದುರದೃಷ್ಟವಶಾತ್ ಈ ರೀತಿಯ ಘಟನೆ ನಡೆದಿದೆ. ಮುಂದೆ ಇಂತಹ ಅಹಿತಕರ ಘಟನೆ ಮರುಕಳಿಸಬಾರದು. ಶಾಂತಿ ಕಾಪಾಡಲು ಎಲ್ಲರೂ ಸಹಕರಿಸಬೇಕು. ಯಾವುದೇ ರೀತಿಯ ದ್ವೇಷ ಸಾಧಿಸಲು ಅವಕಾಶ ನೀಡಬಾರದು ಎಂದು ಮುಸ್ಲಿಂ ಮುಖಂಡರಿಗೆ ಸೂಚಿಸಿದರು.

ಏಕಾಏಕಿ ಈ ಘಟನೆ ನಡೆಯಲು ಸಾಧ್ಯವಿಲ್ಲ. ಇದರಲ್ಲಿ ಎರಡು ಗುಂಪುಗಳ ನಡುವೆ ಇರುವ ವೈಷಮ್ಯ ಹಾಗೂ ಸಾಮರಸ್ಯದ ಕೊರತೆ ಎದ್ದು ಕಾಣುತ್ತಿದೆ. ಪೊಲೀಸ್ ಇಲಾಖೆ ಉನ್ನತ ಮಟ್ಟದಲ್ಲಿ ತನಿಖೆ ನಡೆಸುವ ಮೂಲಕ 15 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ. ಉಳಿದ 3 ಮಂದಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು. ಪೊಲೀಸ್ ತನಿಖೆ ಬಗ್ಗೆ ಯಾವುದೇ ಅನುಮಾನ ಬೇಡ. ತ್ವರಿತವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಹಲವು ಮುಸ್ಲಿಂ ಮುಖಂಡರ ಅಭಿಪ್ರಾಯ ಪಡೆದರು. ಕೆಲವರು ಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆ ಬಗ್ಗೆ ತಿಳಿಸಿದರು.

ABOUT THE AUTHOR

...view details