ಚಾಮರಾಜನಗರ: ಲಾಕ್ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 12 ಮಂದಿಯನ್ನು ಗುಂಡ್ಲುಪೇಟೆ ತಾಲೂಕಿನ ವಿವಿಧೆಡೆ ಬಂಧಿಸಿರುವ ಘಟನೆ ನಡೆದಿದೆ.
ಗುಂಡ್ಲುಪೇಟೆ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ: 12 ಮಂದಿ ಬಂಧನ - chaamarajanagara crime news
ಬೆಳಗಿನ ಸಮಯ ಮದ್ಯವನ್ನು ಖರೀದಿಸಿ ಗ್ರಾಮೀಣ ಭಾಗದಲ್ಲಿ ಅಕ್ರಮ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಕ್ಕತುಪ್ಪೂರು ಗ್ರಾಮದ ಸ್ವಾಮಿ , ಹೊಂಗಳ್ಳಿಯ ಸಫಿಕ್, ಸಂಗೇಗೌಡನಹಳ್ಳಿಯ ನಾಗೇಶ್, ಅಣ್ಣೂರು ಗ್ರಾಮದ ಮಹಾದೇವ, ಮಳವಳ್ಳಿ ಗ್ರಾಮದ ನವೀನ್, ಕಂದೇಗಾಲದ ಬಸವಯ್ಯ, ತೆರಕಣಾಂಬಿಯ ರಾಸೀದ್, ತೊರವಳ್ಳಿ ಗ್ರಾಮದ ನಾಗರಾಜು, ಕುರಿಯನ್, ಮಣಿ, ಕುಟ್ಟನ್, ಟಿಜೋ ಬಂಧಿತ ಆರೋಪಿಗಳು.
ಬೆಳಗಿನ ಸಮಯ ಮದ್ಯವನ್ನು ಖರೀದಿಸಿ ಗ್ರಾಮೀಣ ಭಾಗದಲ್ಲಿ ಅಕ್ರಮ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು, ಬಂಧಿತರಿಂದ 40ಕ್ಕೂ ಹೆಚ್ಚು ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಾಗಿದೆ.