ಕರ್ನಾಟಕ

karnataka

ETV Bharat / state

ಬೂದಿಪಡಗ ಗ್ರಾಪಂ ಸದಸ್ಯನ ಮೇಲೆ ಕಳ್ಳಬೇಟೆ ಆರೋಪ.. ದಾಳಿ ವೇಳೆ ದಂತ, ಹುಲಿ ಹಲ್ಲು, ಜಿಂಕೆ ಕೊಂಬು, ಟ್ರಿಗರ್​ ವಶಕ್ಕೆ - illegal hunting allegation against village panchayat member

ರಂಗಸ್ವಾಮಿ ಪುಣಜನೂರು ಗ್ರಾ.ಪಂನ ಹಾಲಿ ಸದಸ್ಯನಾಗಿದ್ದು ಕಳ್ಳಬೇಟೆ ಬಯಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ. ಸದ್ಯ, ಅರಣ್ಯಾಧಿಕಾರಿಗಳು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ..

illegal hunting allegation against  village panchayat member
ಬೂದಿಪಡಗ ಗ್ರಾ.ಪಂ ಸದಸ್ಯನ ಮೇಲೆ ಕಳ್ಳಬೇಟೆ ಆರೋಪ

By

Published : Oct 19, 2021, 7:59 PM IST

Updated : Oct 19, 2021, 8:59 PM IST

ಚಾಮರಾಜನಗರ :ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಗ್ರಾಪಂ ಸದಸ್ಯರೊಬ್ಬರು ಕಳ್ಳಬೇಟೆ ಬಯಲು ಮಾಡಿ ಅಪಾರ ಪ್ರಮಾಣದ ಸ್ಫೋಟಕ, ದಂತ, ಹಲ್ಲು ವಶಪಡಿಸಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೂದಿಪಡಗ ಗ್ರಾಮದಲ್ಲಿ ನಡೆದಿದೆ.

ಬೂದಿಪಡಗ ಗ್ರಾಪಂ ಸದಸ್ಯನ ಮೇಲೆ ಕಳ್ಳಬೇಟೆ ಆರೋಪ

ಗ್ರಾಮದ ರಂಗಸ್ವಾಮಿ (45) ಎಂಬುವರ ಮನೆ ಮೇಲೆ ತಮಿಳುನಾಡು ಅರಣ್ಯ ಇಲಾಖೆ ನೀಡಿದ ಮಾಹಿತಿ ಮೇರೆಗೆ ಪುಣಜನೂರು ವಲಯ ಅರಣ್ಯಾಧಿಕಾರಿ ಕಾಂತರಾಜು ಮತ್ತು ಕೆ.ಗುಡಿ ಆರ್​ಎಫ್​ಒ ಜಂಟಿ ಕಾರ್ಯಾಚರಣೆ ನಡೆಸಿ ಎರಡು ಹೆಣ್ಣಾನೆ ಕೋರೆ, ದಂತದ ಚೂರುಗಳು, ತಲಾ ಒಂದು ಚಿರತೆ ಮತ್ತು ಹುಲಿ ಹಲ್ಲು, 5-6 ಜಿಂಕೆ ಕೊಂಬುಗಳು, ಅಪಾರ ಪ್ರಮಾಣದ ಉರುಳು, 4-5 ನಾಡ ಬಂದೂಕಿಗೆ ಬಳಸುವ ಟ್ರಿಗರ್​ಗಳು, ಸ್ಫೋಟಕವನ್ನು ವಶಪಡಿಸಿಕೊಂಡಿದ್ದಾರೆ.

ರಂಗಸ್ವಾಮಿ ಪುಣಜನೂರು ಗ್ರಾ.ಪಂನ ಹಾಲಿ ಸದಸ್ಯನಾಗಿದ್ದು ಕಳ್ಳಬೇಟೆ ಬಯಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ. ಸದ್ಯ, ಅರಣ್ಯಾಧಿಕಾರಿಗಳು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Last Updated : Oct 19, 2021, 8:59 PM IST

ABOUT THE AUTHOR

...view details