ಚಾಮರಾಜನಗರ: ಪರಿಸರ ಸೂಕ್ಷ್ಮ ವಲಯವಾದ ಬಂಡೀಪುರ ಸುತ್ತಮುತ್ತ ಮನೆಗೆ ಅನುಮತಿ ಪಡೆದು ಅಕ್ರಮ ಹೋಂ ಸ್ಟೇಗಳನ್ನು ನಿರ್ಮಿಸಿರುವ ಆರೋಪ ಕೇಳಿಬಂದಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾ.ಪಂ ಹಾಗೂ ಮಂಗಳ ಗ್ರಾ.ಪಂ ವ್ಯಾಪ್ತಿಯಲ್ಲಿ ಹೊರ ಜಿಲ್ಲೆ , ಹೊರ ರಾಜ್ಯದಿಂದ ಬಂದ ಕೆಲವರು ಸ್ಥಳೀಯರಿಂದ ಜಮೀನು ಖರೀದಿಸಿ ಮನೆ ಕಟ್ಟಲು ಅನುಮತಿ ಪಡೆದು, ಅಕ್ರಮವಾಗಿ ಹೋಂ ಸ್ಟೇಗಳನ್ನು ನಿರ್ಮಿಸಿರುವ ಕುರಿತು ಆರೋಪ ಕೇಳಿಬಂದಿತ್ತು.
ಮನೆಗೆ ಅನುಮತಿ ಪಡೆದು ಹೋಂ ಸ್ಟೇ ಬಂಡೀಪುರ ಸಿಎಫ್ಒ ಬಾಲಚಂದ್ರ ಹಾಗೂ ಎಸಿಎಫ್ ಪರಮೇಶ್ 13 ಹೋಂ ಸ್ಟೇಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ. ಮಂಗಳ, ಎಲಚೆಟ್ಟಿ, ಜಕ್ಕಹಳ್ಳಿ ಗ್ರಾಮಗಳಲ್ಲಿ ಮನೆ ನಿರ್ಮಿಸುತ್ತೇವೆ ಎಂದು ಅನುಮತಿ ಪಡೆದು ಹೋಂ ಸ್ಟೇ ನಿರ್ಮಿಸಿರುವ ಕುರಿತು ಬಂಡೀಪುರ ಸಿಎಫ್ಒ ಬಾಲಚಂದ್ರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ರಿಗೆ ಪತ್ರ ಬರೆದು ಈ ಅಕ್ರಮ ಮಟ್ಟ ಹಾಕಲು ಮುಂದಾಗಿದ್ದಾರೆ.
ಈ ಸಂಬಂಧ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಫ್ಒ ಬಾಲಚಂದ್ರ, ಮೇಲ್ನೋಟಕ್ಕೆ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿದುಬಂದಿದೆ. 2012 ರ ಬಳಿಕ ಎಷ್ಟು ಮಂದಿಗೆ ಮನೆಗಳನ್ನು ಕಟ್ಟಿಕೊಳ್ಳಲು ಅನುಮತಿ ನೀಡಿರುವ ಕುರಿತು ವರದಿ ನೀಡಲು ಪಿಡಿಒಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.