ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಮೀನು‌ ಹಿಡಿಯಲು ಹೊರಟವರ ಬಂಧನ - ಅಕ್ರಮವಾಗಿ ಮೀನು ಬೇಟೆಗೆ ಹೊರಟ್ಟಿದ್ದ ಆರೋಪಿಗಳ ಬಂಧನ

ನದಿಯಲ್ಲಿ ಅಕ್ರಮವಾಗಿ ಮೀನು ಹಿಡಿಯಲು ಹೊರಟಿದ್ದ ಆರೋಪಿಗಳನ್ನು‌ ಅರಣ್ಯ ‌ಅಧಿಕಾರಿಗಳು ಬಂಧಿಸಿದ್ದಾರೆ.

illegal-fish-hunters-arrested-in-kollegala
ಅಕ್ರಮ ಮೀನು‌ ಹಿಡಿಯಲು ಹೊರಟವರ ಬಂಧನ

By

Published : Mar 31, 2021, 2:57 AM IST

ಕೊಳ್ಳೇಗಾಲ:ಇಲ್ಲಿನ ಕೊತ್ತನೂರು ಅರಣ್ಯ ವ್ಯಾಪ್ತಿಯ ಕಾವೇರಿ ನದಿಯಲ್ಲಿ ಅಕ್ರಮವಾಗಿ ಮೀನು ಬೇಟೆಗೆ ತೆರಳುತ್ತಿದ್ದ 8 ಮಂದಿ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಜಾಗೇರಿ ಚಿನ್ನಪ್ಪ(42), ಅಮಲ್‌ ಅರ್ಪುದ್ ಜಯರಾಜ್(32), ಪೀಟರ್ ಪೇರಿಯನಾಯಗಂ (35), ಸ್ಟ್ಯಾನ್ಯಿ ಜಾನ್ ಬೋಸ್ಕೊ(35), ಅರುಳ್ ರಾಜ್ (35), ಪೆರಿಯನಾಯಗಮ್ಮ(34), ಜ್ಯೋತಿಪ್ರಿಯಾ(28) ಹಾಗೂ ಸುನೀತಾ(28) ಬಂಧಿತ ಆರೋಪಿಗಳಾಗಿದ್ದಾರೆ.

ಕೊತ್ತನೂರು ಅರಣ್ಯ ವಲಯ ಪ್ರದೇಶ ವ್ಯಾಪ್ತಿಯ ಚಿಕ್ಕಲ್ಲೂರು ಬೀಟ್​​ಗೆ ಸೇರಿದ ಅರಣ್ಯದ ಎಣ್ಣೆಹೊಳೆಯ ಬಳಿ ಅಕ್ರಮವಾಗಿ ಮೀನು ಹಿಡಿಯಲು ಪರಿಕರಗಳೊಂದಿಗೆ ಆರೋಪಿಗಳು ಹೊರಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಡಿಸಿಎಫ್ ಎಸ್.ರಮೇಶ್ ಹಾಗೂ ಎಸಿಎಫ್ ಅಂಕರಾಜು ಮಾರ್ಗದರ್ಶನದಲ್ಲಿ ಇಲ್ಲಿನ ಅರಣ್ಯಾಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ಐದು ಬೋಟ್, ಐದು ಬಲೆ, ಐದು ಹುಟ್ಟು, ಮೀನು ಬೇಟೆಯ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆಯಲ್ಲಿ‌ ಪ್ರಕರಣ ದಾಖಲಾಗಿದೆ.

ABOUT THE AUTHOR

...view details