ಚಾಮರಾಜನಗರ:ಅಕ್ರಮವಾಗಿ ಅಡುಗೆ ಅನಿಲ ಸಿಲಿಂಡರ್ಗಳನ್ನು(Illegal cooking gas sale) ದಾಸ್ತಾನಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ದಂಧೆಯೊಂದನ್ನು ಆಹಾರ ಇಲಾಖೆ ಪತ್ತೆಹಚ್ಚಿ, ಓರ್ವನನ್ನು ಬಂಧಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಅಕ್ರಮ ಅಡುಗೆ ಅನಿಲ ಮಾರಾಟ: ಚಾಮರಾಜನಗರದಲ್ಲಿ ಓರ್ವನ ಬಂಧನ - ಅಕ್ರಮ ಅಡುಗೆ ಅನಿಲ ಮಾರಾಟ
ಅಕ್ರಮವಾಗಿ ಅಡುಗೆ ಅನಿಲ ಸಿಲಿಂಡರ್ಗಳನ್ನು(Illegal cooking Gas sale) ದಾಸ್ತಾನಿಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನಿಂದ 4 ಗೃಹ ಬಳಕೆ ಸಿಲಿಂಡರ್ ಹಾಗೂ 111 ವಾಣಿಜ್ಯ ಬಳಕೆ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದ ಜಗದೀಶ್ ಬಂಧಿತ ಮಾರಾಟಗಾರ. ನಗರದ ರೈಲ್ವೆ ನಿಲ್ದಾಣ ಸಮೀಪದ ಮಾಂಗಲ್ಯ ಕಲ್ಯಾಣ ಮಂಟಪದ ಹಿಂಭಾಗ ಹಳೆಯ ಮನೆಯಲ್ಲಿ ದಂಧೆ ನಡಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ರಾಜಣ್ಣ ತಂಡ ದಾಳಿ ನಡೆಸಿ 4 ಗೃಹ ಬಳಕೆ ಸಿಲಿಂಡರ್ ಹಾಗೂ 111 ವಾಣಿಜ್ಯ ಬಳಕೆ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸದ್ಯ, ಆರೋಪಿ ಜಗದೀಶ್ ಹಾಗೂ ಒಟ್ಟು 115 ಸಿಲಿಂಡರ್, 1 ಬೊಲೆರೊ ಪಿಕ್ಅಪ್ ವಾಹನ ಹಾಗೂ 1 ಗೂಡ್ಸ್ ಆಟೋವನ್ನು ಆಹಾರ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮಕ್ಕಾಗಿ ಚಾಮರಾಜನಗರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿ, ಪ್ರಕರಣ ದಾಖಲಿಸಿದ್ದಾರೆ.