ಚಾಮರಾಜನಗರ :ವರ್ಗಾವಣೆಯಾದ ಬಳಿಕ ಡಿಜಿಟಲ್ ಕೀ ಉಪಯೋಗಿಸಿ ಏಕ ನಿವೇಶನವನ್ನು ನಗರ ಪ್ರಾಧಿಕಾರದ ಅನುಮತಿ ಪಡೆಯದೇ ಬಹು ನಿವೇಶಗಳನ್ನಾಗಿ ವಿಂಗಡಿಸಿ ಇ-ಸ್ವತ್ತು ನೀಡಿ ಅಕ್ರಮ ಎಸಗಿದ ಆರೋಪದ ಹಿನ್ನೆಲೆ ಕೊಳ್ಳೆಗಾಲ ನಗರಸಭೆ ಪೌರಾಯುಕ್ತ ನಾಗಶೆಟ್ಟಿ ಅವರನ್ನು ಅಮಾನತು ಮಾಡಲಾಗಿದೆ.
ಈ ಕುರಿತು ಡಿಸಿ ಡಾ.ಎಂ ಆರ್ ರವಿ ಪತ್ರಿಕಾ ಪ್ರಕಟಣೆ ನೀಡಿದ್ದು, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿರುವ ಹಿನ್ನೆಲೆ ನಾಗಶೆಟ್ಟಿ ಅವರನ್ನು ತಕ್ಷಣದಿಂದ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.