ಕರ್ನಾಟಕ

karnataka

ETV Bharat / state

ಚಾಮರಾಜನಗರ ಪೊಲೀಸ್ ಕ್ವಾಟ್ರಸ್​ನ ಅಭಿವೃದ್ಧಿ ಕೆಲಸಕ್ಕೆ ಐಜಿಪಿ ಚಾಲನೆ - ಐಜಿಪಿ ಪ್ರವೀಣ್ ಮಧುಕರ್ ಪವಾರ್

ಚಾಮರಾಜನಗರ ಪೊಲೀಸ್ ಕ್ವಾಟ್ರಸ್​ನ ಅಭಿವೃದ್ಧಿ ಕಾಮಗಾರಿಗಳಿಗೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಇಂದು ಚಾಲನೆ ನೀಡಿದರು.

IGP Praveen Madhukar Pawar
ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್

By

Published : Jan 19, 2021, 4:10 PM IST

ಚಾಮರಾಜನಗರ:ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪೊಲೀಸ್ ವಸತಿಗೃಹದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾದ ಹಿನ್ನೆಲೆಯಲ್ಲಿ ಇಂದಿನಿಂದ ಹಲವು ಕಾಮಗಾರಿ ಆರಂಭಗೊಂಡವು.

ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್

ವಸತಿಗೃಹ ಸಮುಚ್ಛಯದ ಸುತ್ತ ಕಾಂಪೌಂಡ್, ಚರಂಡಿ, ಕಾಂಕ್ರೀಟ್ ರಸ್ತೆ ಕಾಮಗಾರಿಗಳಿಗೆ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಚಾಲನೆ ನೀಡಿ ಮಾರ್ಚ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಚಾಮರಾಜನಗರ ಸೇರಿದಂತೆ ಗುಂಡ್ಲುಪೇಟೆ, ಸಂತೇಮರಹಳ್ಳಿ ಹಾಗೂ ಬೇಗೂರಿನಲ್ಲಿನ ವಸತಿಗೃಹ ಕಾಯಕಲ್ಪ ಸಿಗಲಿದೆ‌. ಚಾಮರಾಜನಗರ ಕ್ವಾಟ್ರಸ್ ಅಭಿವೃದ್ಧಿಗಾಗಿ 6.23 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

ಈಗಾಗಲೇ ನಾಲ್ಕು ಜಿಲ್ಲೆಗಳಲ್ಲಿ ಅಧಿಕಾರಿಗಳ‌ ಸಭೆ ನಡೆಸಿದ್ದು ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ. ಅನ್ಯಾಯ, ಅಕ್ರಮ, ಅನೈತಿಕ ಚಟುವಟಿಕೆಗಳನ್ನು ಎಂದಿಗೂ ಸಹಿಸುವುದಿಲ್ಲ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ABOUT THE AUTHOR

...view details