ಕರ್ನಾಟಕ

karnataka

ETV Bharat / state

ನಾನು ತಪ್ಪು ಮಾಡಿದ್ದರೆ ನೇಣಿಗೇರಿಸಲಿ: ಅಂಬೇಡ್ಕರ್​​ ವಿವಾದಕ್ಕೆ ಸುರೇಶ್​ ಕುಮಾರ್​​​​ ಪ್ರತಿಕ್ರಿಯೆ - ಪ್ರಗತಿಪರರ ಪ್ರತಿಭಟನೆಯಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್

ಹನೂರಿನ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್, ಪ್ರಗತಿಪರರು ಪ್ರತಿಭಟನೆ ನಡೆಸಿ ನನ್ನ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅಂಬೇಡ್ಕರ್ ಕುರಿತು ಉಂಟಾಗಿರುವ ವಿವಾದದಲ್ಲಿ ನನ್ನ ಪಾತ್ರವಿಲ್ಲ. ನಾನು ತಪ್ಪು ಮಾಡಿದ್ದರೆ ನನ್ನನ್ನು ನೇಣಿಗೇರಿಸಲಿ ಎಂದು ಹೇಳಿದ್ರು.

ಅಂಬೇಡ್ಕರ್ ವಿವಾದಕ್ಕೆ ಸುರೇಶ್ ಕುಮಾರ್ ಪ್ರತಿಕ್ರಿಯೆ

By

Published : Nov 19, 2019, 4:46 PM IST

ಚಾಮರಾಜನಗರ:ಅಂಬೇಡ್ಕರ್ ಕುರಿತು ಉಂಟಾಗಿರುವ ವಿವಾದದಲ್ಲಿ ನನ್ನ ಪಾತ್ರವಿಲ್ಲ. ನಾನು ತಪ್ಪು ಮಾಡಿದ್ದರೆ ಚಾಮರಾಜನಗರ ವೃತ್ತದಲ್ಲಿ ನೇಣಿಗೇರಿಸಲಿ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಹನೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಪ್ರಗತಿಪರರು ಪ್ರತಿಭಟನೆ ನಡೆಸಿ ನನ್ನ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇದರಲ್ಲಿ ನನ್ನ ಪಾತ್ರವಿದ್ದರೆ ಚಾಮರಾಜನಗರ ವೃತ್ತದಲ್ಲಿ ನೇಣಿಗೇರಿಸಲಿ ಎಂದರು.

ಅಂಬೇಡ್ಕರ್ ವಿವಾದಕ್ಕೆ ಸುರೇಶ್ ಕುಮಾರ್ ಪ್ರತಿಕ್ರಿಯೆ

ಅಂಬೇಡ್ಕರ್ ಕುರಿತ ವಿವಾದ ಎದ್ದಾಗಿನಿಂದ ನಡೆದ ಸರಣಿ ಬೆಳವಣಿಗೆಗಳನ್ನು ಪೂರ್ವಾಗ್ರಹಪೀಡಿತವಾಗದೇ ಪ್ರಗತಿಪರರು ಗಮನಿಸಬೇಕು‌. ಖಾಸಗಿ ಸಂಸ್ಥೆ ನೀಡಿದ ಕೈಪಿಡಿಯನ್ನು ಶಿಕ್ಷಣ ಇಲಾಖೆ ಸಿಬ್ಬಂದಿ ಕರ್ತವ್ಯಲೋಪ ಎಸಗಿ ವೆಬ್​​ಸೈಟ್​​ಗೆ ಅಪ್​​ಲೋಡ್ ಮಾಡಿದ್ದಾರೆ. ಈಗಾಗಲೇ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಇಲಾಖೆ ಮಟ್ಟದಲ್ಲಿ ತನಿಖೆಯೂ ಕೂಡ ನಡೆಯಲಿದೆ ಎಂದು ಸಮಜಾಯಿಷಿ ನೀಡಿದರು.

ಪ್ರಗತಿಪರರ ಪ್ರತಿಭಟನೆಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್, ಶಾಸಕ ಮಹೇಶ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗುವುದನ್ನು ನೋಡಿದರೆ ಇದೊಂದು ರಾಜಕೀಯ ಹುನ್ನಾರ ಎಂದು ಪ್ರತಿಭಟನಾಕಾರರ ವಿರುದ್ಧ ಗಂಭೀರ ಆರೋಪ ಮಾಡಿದರು.

ಇದೇ ವೇಳೆ, ಪ್ರಶ್ನೆಯೊಂದಕ್ಕೆ ಉತ್ತರಿಸಿ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಬೇಕೆನ್ನುವ ಮನಸ್ಥಿತಿ ನನಗಿಲ್ಲ. ಅವರ ಬಗ್ಗೆ ನನಗಿರುವ ಗೌರವವನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಹಾಗೂ ಆರ್​​ಎಸ್​ಎಸ್​​ಗೂ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ABOUT THE AUTHOR

...view details