ಕೊಳ್ಳೇಗಾಲ :ವಾರ ಮತ್ತು ತಿಂಗಳ ಲೆಕ್ಕದಲ್ಲಿ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದ ಜನರು ಕರ್ಫ್ಯೂ ಸಂಕಷ್ಟದಲ್ಲಿ ಕೆಲಸವಿಲ್ಲದೆ, ಸಾಲದ ಕಂತು ಕಟ್ಟಲಾಗದೇ ಹೆಣಗಾಡುತ್ತಿದ್ದಾರೆ. ಆದ್ದರಿಂದ ಸಾಲ ವಸೂಲಾತಿ ಮಾಡದಂತೆ ಮೈಕ್ರೋ ಫೈನಾನ್ಸ್‌ಗಳಿಗೆ ಸೂಚನೆ ನೀಡುತ್ತೇನೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದ್ದಾರೆ.
ನಗರದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ವಾರ-ತಿಂಗಳ ಲೆಕ್ಕದಲ್ಲಿ ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಪಡೆದ ಜನರು ಕರ್ಫ್ಯೂ ಸಂಕಷ್ಟದಲ್ಲಿ ಕೆಲಸವಿಲ್ಲದೆ ಹೆಣಗಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಂತವರಿಗೆ ಸಾಲ ಮರು ಪಾವತಿಗೆ ಒತ್ತಡ ಹಾಕದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಶಾಸಕ ಎನ್. ಮಹೇಶ್ ಅಭಯ:ನಿನ್ನೆಯಷ್ಟೇ ಶಾಸಕ ಎನ್.ಮಹೇಶ್ ಕರ್ಫ್ಯೂ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರು ಮೈಕ್ರೋ ಫೈನಾನ್ಸ್ಗ್ಳಿಂದ ಪಡೆದ ಸಾಲವನ್ನು ಕಟ್ಟಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ.
ಕೂಡಲೇ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ವಸೂಲಿ ಮಾಡಬಾರದು ಎಂದು ಸೂಚನೆ ನೀಡಬೇಕು.
ಇದನ್ನು ಸರ್ಕಾರ ಮಾಡದೇ ಹೋದರೆ, ಶಾಸಕನಾಗಿ ನಾನು ಹೇಳುತ್ತೇನೆ ಕೊಳ್ಳೇಗಾಲ ಜನರು ಫೈನಾನ್ಸ್ ಮಾಡುವ ಸಂಘ-ಸಂಸ್ಥೆಗಳಿಗೆ ಹಣ ಕಟ್ಟಬೇಡಿ, ವಸೂಲಿಗರು ಪೀಡಿಸಿದರೆ ನನಗೆ ಹೇಳಿ ಎಂದಿದ್ದರು.