ಕರ್ನಾಟಕ

karnataka

ETV Bharat / state

ಕೋವಿಡ್ ಪಿಡುಗಿನಲ್ಲಿ ನೆರವಾಗುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಶಾಸಕ ಎನ್.ಮಹೇಶ್  ಕೃತಜ್ಞತೆ

ಕರ್ನಾಟಕ ಹೆಲ್ತ್ ಸರ್ವಿಸ್ ಸಂಸ್ಥೆಯು ಕೊಳ್ಖೇಗಾಲ ಸರ್ಕಾರಿ ಆಸ್ಪತ್ರೆಗೆ 30 ಕಸದ ಬುಟ್ಟಿ‌, 7 ಆಕ್ಸಿಜನ್ ಕಾನ್ಸ್ಂಟ್ರೇಟರ್ ಹಾಗೂ 2 ಬೈಪ್ಯಾಕ್ ಮಿಷನ್​ಅನ್ನು ಕೊಡುಗೆಯಾಗಿ ನೀಡಿದೆ. ಕೊರೊನಾ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಸ್ವಯಂ ಸೇವಾ ಸಂಘಗಳು ರಾಜ್ಯದ್ಯಂತ ಆಸ್ಪತ್ರೆಗಳು ಹಾಗೂ ರೋಗಿಗಳಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

ಸ್ವಯಂ ಸೇವಾ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಮಹೇಶ್
ಸ್ವಯಂ ಸೇವಾ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಮಹೇಶ್

By

Published : Jun 6, 2021, 5:18 AM IST

ಕೊಳ್ಳೇಗಾಲ: ಕೊರೊನಾ ಪಿಡುಗಿನ‌ ಸಂದರ್ಭದಲ್ಲಿ ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ರಾಜ್ಯದ್ಯಂತ ಆಸ್ಪತ್ರೆ ಹಾಗೂ ರೋಗಿಗಳಿಗೆ ಸಹಾಯ ಮಾಡುತ್ತಿದ್ದು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ 'ನಮ್ಮ ಊರು ನಮ್ಮ ಆಸ್ಪತ್ರೆ ಅಭಿಯಾನ'ಕ್ಕೆ ಶಾಸಕ ಎನ್.ಮಹೇಶ್ ಗಿಡ ನೆಡುವುದರ ಮೂಲಕ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಸ್ವಯಂ ಸೇವಾ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಮಹೇಶ್

ಕರ್ನಾಟಕ ಹೆಲ್ತ್ ಸರ್ವಿಸ್ ಸಂಸ್ಥೆಯು ಕೊಳ್ಖೇಗಾಲ ಸರ್ಕಾರಿ ಆಸ್ಪತ್ರೆಗೆ 30 ಕಸದ ಬುಟ್ಟಿ‌, 7 ಆಕ್ಸಿಜನ್ ಕಾನ್ಸ್ಂಟ್ರೇಟರ್ ಹಾಗೂ 2 ಬೈಪ್ಯಾಕ್ ಮಿಷನ್​ಅನ್ನು ಕೊಡುಗೆಯಾಗಿ ನೀಡಿದೆ. ಕೊರೊನಾ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಸ್ವಯಂ ಸೇವಾ ಸಂಘಗಳು ರಾಜ್ಯದ್ಯಂತ ಆಸ್ಪತ್ರೆಗಳು ಹಾಗೂ ರೋಗಿಗಳಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

ಇನ್ನೂ ಆಸ್ಪತ್ರೆಯ ಸುತ್ತಲಿರುವ ಮಣ್ಣಿನ ರಸ್ತೆಯನ್ನು ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಳಸಿ ಡಾಂಬರು ಹಾಕಿ ವ್ಯವಸ್ಥಿತವಾಗಿ ಮಾಡಬೇಕೆಂದು ಡಿಸಿಗೆ ಪತ್ರ ಬರೆದಿದ್ದಾನೆ. ವಿಶೇಷವಾಗಿ 5 ತಜ್ಞ ವೈದ್ಯರನ್ನು ಸಹ ಸರ್ಕಾರ ಕೊಳ್ಳೇಗಾಲ ಆಸ್ಪತ್ರೆಗೆ‌ ನಿಯೋಜಿಸಿದೆ.

ABOUT THE AUTHOR

...view details