ಚಾಮರಾಜನಗರ : ನಾನು ರಾಜಕೀಯ ಮಾಡುವುದಿಲ್ಲ. ನಾನು ಜನಸೇವೆ ಮಾಡಬೇಕಿದೆ. ಯಾವಾಗಲೂ ರಾಜಕೀಯವನ್ನೇ ಮಾಡಿದರೇ ಆತ ಜನಪ್ರತಿನಿಧಿಯಾಗಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಚಾಮರಾಜನಗರದಲ್ಲಿ ಹೇಳಿದ್ದಾರೆ.
ನಾನು ರಾಜಕೀಯ ಮಾಡೋದು ಬಿಟ್ಟಿದ್ದೀನಿ : ಸಚಿವ ಸುಧಾಕರ್ - ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್
ನಾನು ರಾಜಕೀಯ ಮಾಡುವುದಿಲ್ಲ. ನಾನು ಜನಸೇವೆ ಮಾಡಬೇಕಿದೆ. ಯಾವಾಗಲೂ ರಾಜಕೀಯವನ್ನೇ ಮಾಡಿದರೇ ಆತ ಜನಪ್ರತಿನಿಧಿಯಾಗಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಚಾಮರಾಜನಗರದಲ್ಲಿ ಹೇಳಿದ್ದಾರೆ.
ನಗರದ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ಸಮಯದಲ್ಲಿ ಮಾತನಾಡಿ ಚುನಾವಣೆಯಲ್ಲಷ್ಟೇ ರಾಜಕೀಯ ಮಾಡಬೇಕು, ಬಳಿಕ ಜನಸೇವೆ ಮಾಡಬೇಕು. ಅದು ಹೆಸರಿಗೆ ಮಾತ್ರ ಶಾದಿ ಭಾಗ್ಯವಾಗಿತ್ತು. ಸಾವಿರ ಜನ ಅರ್ಜಿ ಹಾಕಿದರೇ ಐದಾರು ಜನಕ್ಕೆ ಕೊಡೋರು, ಅದು ಶಾದಿ ಭಾಗ್ಯವೇ?, ಬೇರೆ ಜಾತಿಗಳಲ್ಲಿ, ಧರ್ಮಗಳಲ್ಲಿ ಮದುವೆ ಮಾಡಿಕೊಳ್ತಾರೆ ಅವರಿಗೆ ಭಾಗ್ಯ ಬೇಡವಾ, ಕಾಂಗ್ರೆಸ್ ಯಾವತ್ತೂ ಕೂಡ ತಾರತಮ್ಯ ಮಾಡ್ತಾ ಇದೆ ಎಂದರು.
ಬಿಜೆಪಿ ಸರ್ಕಾರ ಯಾವತ್ತೂ ಕೂಡ ಭಾರತೀಯರು ಅಂದ್ರೆ ಭಾರತೀಯರು. ನಮಗೆ ಓಲೈಕೆ ಮಾಡುವ ಬುದ್ಧಿಯಿಲ್ಲ ಎಂದು ಸಮರ್ಥಿಸಿಕೊಂಡರುಸಿದ್ದರಾಮಯ್ಯ ಬಿಎಸ್ವೈ ಕುರಿತು ಮೃಧುದೋರಣೆ ತಾಳುತಿದ್ದಾರೆ, ಬಿಜೆಪಿಗೇನಾದರೂ ಬರುತ್ತಾರ ಎಂಬ ಪ್ರಶ್ನೆಗೆ ಉತ್ತರಿಸಿ ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಎಂದರು.