ಚಾಮರಾಜನಗರ:ಚಿತ್ರರಂಗಕ್ಕೆ ಮತ್ತು ನನಗೆ ಹೆಚ್ಚಿನ ಸಂಬಂಧ ಇಲ್ಲ. ನಟಿ ರಾಗಿಣಿಯನ್ನು ಚುನಾವಣಾ ಪ್ರಚಾರಕ್ಕೆ ನಾವು ಕರೆಸಿರಲಿಲ್ಲ ಎಂದು ಸಚಿವ ನಾರಾಯಣ ಗೌಡ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಚಿತ್ರರಂಗದಲ್ಲಿ ಕೆಲಸ ಮಾಡುವ ನನ್ನ ಸ್ನೇಹಿತರು ಪ್ರಚಾರಕ್ಕೆ ಕರೆಸಿದ್ದರು. ರಾಗಿಣಿ ಈ ರೀತಿ ಎಂದು ಗೊತ್ತಿರಲಿಲ್ಲ. ಶಿವಪ್ರಕಾಶ್ ರಾಗಿಣಿ ಜೊತೆ ಮೂರು ವರ್ಷ ಕಾಲ ಕೆಲಸ ಮಾಡಿದ್ದು, ಅವರ ಹೆಸರು ಸಹ ಕೇಳಿ ಬರುತ್ತಿದೆ. ಇದರ ಬಗ್ಗೆ ಸಹ ನನಗೆ ಗೊತ್ತಿಲ್ಲವೆಂದು ಸ್ಪಷ್ಟಪಡಿಸಿದರು.