ಚಾಮರಾಜನಗರ:ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ, ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯೂ ಆಗಲ್ಲ ಎಂದು ಬಿಎಸ್ಪಿ ಉಚ್ಛಾಟಿತ ಶಾಸಕ ಎನ್.ಮಹೇಶ್ ಹೇಳಿದರು.
ಬಿಜೆಪಿಗೆ ಹೋಗಲ್ಲ, ಬಿಎಸ್ವೈ ಸರ್ಕಾರದಲ್ಲಿ ಮಂತ್ರಿಯೂ ಆಗಲ್ಲ: ಎನ್.ಮಹೇಶ್ ಸ್ಪಷ್ಟನೆ - ಬಿಎಸ್ಪಿ ಶಾಸಕ ಮಹೇಶ್
ಸೌಜನ್ಯಕ್ಕಾಗಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಿಎಂ ಆಗಿದ್ದಕ್ಕೆ ಅಭಿನಂದಿಸಿದೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದು ಶಾಸಕ ಎನ್.ಮಹೇಶ್ ಸ್ಪಷ್ಟಪಡಿಸಿದ್ರು.
ಎನ್.ಮಹೇಶ್, ಬಿಎಸ್ಪಿ ಉಚ್ಛಾಟಿತ ಶಾ
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಜನ್ಯಕ್ಕಾಗಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಿಎಂ ಆಗಿದ್ದಕ್ಕೆ ಅಭಿನಂದಿಸಿದೆ. ಆದರೆ, ಮಾಧ್ಯಮಗಳಲ್ಲಿ ಹರಿದಾಡಿದ ಕಪೋಲಕಲ್ಪಿತ ಸುದ್ದಿ ನಿಜಕ್ಕೂ ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.
ಬಿಎಸ್ಪಿಯಲ್ಲಿ ಇದ್ದೇನೆ, ಬಿಎಸ್ಪಿಯಲ್ಲೇ ಇರುತ್ತೇನೆ. ಸಂವಹನ ಕೊರತೆಯಿಂದ ಹೀಗಾಗಿದೆ. ಪಕ್ಷದ ವರಿಷ್ಟೆ ಮಾಯಾವತಿ ಅವರಿಗೆ ಸತ್ಯ ಸಂಗತಿ ಅರಿವು ಮಾಡಿಸುತ್ತೇನೆ. ಪಕ್ಷದ ತೀರ್ಮಾನದಂತೆ ಸದನದಿಂದ ಹೊರಗುಳಿದಿದ್ದೆ ಎಂದರು.