ಚಾಮರಾಜನಗರ:ಕೌಟಂಬಿಕ ಕಲಹ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದಿರುವ ಘಟನೆ ಮಲೆಮಹದೇಶ್ವರ ಬೆಟ್ಟದ ಆಣೆಹೊಲ ಎಂಬಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಹಾದೇವ ತನ್ನ ಪತ್ನಿ ಸಿದ್ದಮ್ಮ(28) ಳನ್ನು ಕೊಲೆ ಮಾಡಿದ್ದಾನೆ. ಆರೋಪಿ ಮಹಾದೇವ ಕುಡಿತದ ಚಟಕ್ಕೆ ದಾಸನಾಗಿದ್ದ. ಕೊಡಗಿನಲ್ಲಿ ಕೂಲಿ ಮಾಡುತ್ತಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮಕ್ಕೆ ಹಿಂತಿರುಗಿ ಬಂದಿದ್ದ ಎಂದು ತಿಳಿದುಬಂದಿದೆ.
ಶುಕ್ರವಾರ ಸಂಜೆಯೂ ಕುಡಿದು ಬಂದ ಮಹಾದೇವ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸುತ್ತಿಗೆ ಮತ್ತು ಮಚ್ಚಿನಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಬಳಿಕ, ಪತ್ನಿಯ ಕಾಲುಗಳನ್ನು ಮಡಚಿ, ಅಗರಬತ್ತಿ ಹಚ್ಚಿ ಕುಳಿತಿದ್ದ ವೇಳೆ ಮಗ ಮನೋಜ್ ಮನೆಗೆ ಬಂದು ತಾಯಿ ಶವ ಕಂಡು ಅಳತೊಡಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.