ಚಾಮರಾಜನಗರ:ವಿವಾಹೇತರ ಸಂಬಂಧ ವಿಚಾರವಾಗಿ ಪತಿ ತನ್ನ ಪತ್ನಿಯ ಪ್ರಿಯಕರನನ್ನು ದೊಣ್ಣೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ.
ಬಸವಶೆಟ್ಟಿ (28) ಕೊಲೆಯಾದ ಯುವಕ. ಶಿವಣ್ಣ ಕೊಲೆ ಮಾಡಿರುವ ಆರೋಪಿ. ಶಿವಣ್ಣನ ಪತ್ನಿಯೊಂದಿಗೆ ಬಸವಶೆಟ್ಟಿ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಬುಧವಾರ ರಾತ್ರಿ ಪತ್ನಿ ಹಾಗೂ ಆಕೆಯ ಪ್ರಿಯಕರ ಒಟ್ಟಿಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.