ಚಾಮರಾಜನಗರ: ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ದಂಪತಿ ಬಾಳಿಗೆ ಕೊರೊನಾ ಕೊಳ್ಳಿ ಇಟ್ಟಿದ್ದು ಒಂದೇ ದಿನ ಗಂಡ-ಹೆಂಡತಿ ಕೊರೊನಾಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಸುದರ್ಶನ(51) ಹಾಗೂ ಹೇಮಲತಾ (46) ಮೃತರು. ಕಳೆದ ಒಂದು ವಾರದ ಹಿಂದೆ ಈ ದಂಪತಿಗೆ ಕೋವಿಡ್ ದೃಢವಾಗಿತ್ತು. ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವಿಧಿಯ ಆಟವೇ ಬೆರೆಯಾಗಿತ್ತು ಅನಿಸುತ್ತೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಸುದರ್ಶನ್ ಅಸುನೀಗಿದರೇ ಸಂಜೆ ಹೇಮಲತಾ ಕೂಡ ಕೊನೆಯುಸಿರೆಳೆದಿದ್ದಾರೆ.