ಚಾಮರಾಜನಗರ: ತಮಿಳುನಾಡು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿದ ಜಿಂಕೆ ಮಾಂಸವನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಈರೋಡ್ ಅರಣ್ಯದಲ್ಲಿ ಜಿಂಕೆ ಬೇಟೆ: ದಾಳಿಯಲ್ಲಿ ಸಿಕ್ಕಿದ್ದು 400 ಕೆಜಿ ಜಿಂಕೆ ಮಾಂಸ! - undefined
ಸುಮಾರು 400 ಕೆ.ಜಿ ಜಿಂಕೆ ಮಾಂಸವನ್ನು ಚಾಮರಾಜನಗರದಲ್ಲಿ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಜೆಂಕೆ ಮಾಂಸ
ಬೇಟೆಗಾರರ ಬಗ್ಗೆ ಖಚಿತ ಸುಳಿವು ದೊರೆತು ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ, 400 ಕೆ.ಜಿ ಜಿಂಕೆ ಮಾಂಸ, ಜೀಪು, ನಾಡ ಬಂದೂಕು, ಉರುಳು ಇನ್ನಿತರೆ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಬೇಟೆಗಾರರು ಪರಾರಿಯಾಗಿದ್ದಾರೆ. ನಮ್ಮ ರಾಜ್ಯದ ಗಡಿಯಂಚಿನ ಈರೋಡ್ ಅರಣ್ಯ ಪ್ರದೇಶದಲ್ಲಿ ಜಿಂಕೆಗಳನ್ನು ಬೇಟೆಯಾಡಲಾಗುತ್ತಿದೆ.
ಪಾಲಾರ್ ನದಿಯಲ್ಲಿ ಮಾಂಸ ಕತ್ತರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಜೀಪಿನಲ್ಲಿ ಸಾಗಣೆ ಮಾಡುತ್ತಿರುವ ಸುಳಿವಿನ ಜಾಡು ಹಿಡಿದ ಪಾಲಾರ್ ಅರಣ್ಯಾಧಿಕಾರಿಗಳು ಬೇಟೆಗಾರರಿಗೆ ಬಲೆ ಬೀಸಿದ್ದರು.