ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳಬೇಟೆಗಾರರು ಸಕ್ರಿಯವಾಗಿದ್ದು, ಅವರ ಜಾಲ ವ್ಯಾಪಕವಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವೇ ಬಂಡೀಪುರ ಸಿಎಫ್ಒಗೆ ಪತ್ರ ಬರೆದಿದೆ.
ಬಂಡೀಪುರದಲ್ಲಿ ಬೇಟೆಗಾರರ ವ್ಯಾಪಕ ಜಾಲ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಜಿಂಕೆ, ಕಡವೆಗಳನ್ನು ಬೇಟೆಯಾಡಿ, ಮಾಂಸವನ್ನು ಜಿಲ್ಲೆ ಹಾಗೂ ಇತರ ಪ್ರದೇಶಗಳಿಗೆ ಮಾರಾಟ ಮಾಡಲಾಗುತ್ತಿರುವ ಕುರಿತು ಎನ್ಟಿಸಿ ತನ್ನ ಮೂಲಗಳಿಂದ ಮಾಹಿತಿ ಕಲೆಹಾಕಿ ಅರಣ್ಯಾಧಿಕಾರಿಗಳಿಗೆ ಚುರುಕು ಮುಟ್ಟಿಸಿದೆ.
ಲಾಕ್ಡೌನ್ ಸಮಯವನ್ನು ಕಳ್ಳಬೇಟೆಗಾರರು ಚೆನ್ನಾಗಿ ಬಳಸಿಕೊಳ್ಳುತ್ತಿರುವ ಕುರಿತು ಅರಣ್ಯ ಇಲಾಖೆ ಎಚ್ಚರಿಸಿ, ಸೂಕ್ತ ಗಸ್ತು ಮತ್ತು ಕರ್ತವ್ಯ ಬಿಗಿಗೊಳಿಸುವಂತೆ ಪ್ರಾಧಿಕಾರ ಸೂಚಿಸಿದೆ. ಕಳ್ಳಬೇಟೆಗಾರರ ಜಾಲ ದೊಡ್ಡದಿದ್ದು, ಮಾಂಸ ಮಾರಾಟದ ದಂಧೆಯಲ್ಲಿ ಹಲವಾರು ವರ್ಷಗಳಿಂದ ಪಳಗಿದ್ದಾರೆ ಎನ್ನಲಾಗಿದೆ.
ಎನ್ಟಿಸಿಯಿಂದ ಸಿಎಫ್ಒಗೆ ಪತ್ರ ಇನ್ನು, ಕಳೆದ ಹದಿನೈದು ದಿನಗಳಿಂದ 14 ಕ್ಕೂ ಹೆಚ್ಚು ಕಳ್ಳ ಬೇಟೆಗಾರರಿಂದ ಅರಣ್ಯ ಇಲಾಖೆ ನೂರಾರು ಕೆಜಿ ಜಿಂಕೆ ಮಾಂಸ, ಪುನುಗು ಬೆಕ್ಕು, ಕಡವೆ ಮಾಂಸ ವಶಪಡಿಸಿಕೊಂಡಿದೆ. ಮಾಂಸ ಮಾರಾಟ ದಂಧೆಯಲ್ಲಿ ಮುಖಂಡರೆನಿಸಿಕೊಂಡವರ ಪಾತ್ರವಿರುವುದಾಗಿ ಆರೋಪ ಕೇಳಿಬಂದಿದ್ದು, ಈಗಾಗಲೇ ಬೇಟೆಯಾಡುವಾಗ ಆದಿವಾಸಿ ಮುಖಂಡ ಮುದ್ದಯ್ಯನ ಪುತ್ರ ಸಿಕ್ಕಿಬಿದ್ದಿದ್ದಾನೆ.
ಬಂಡೀಪುರದಲ್ಲಿ ಬೇಟೆಗಾರರ ಜಾಲ ವ್ಯಾಪಕ ಜಿಂಕೆ ಮಾಂಸ ದಂಧೆಯಲ್ಲಿ ಅಧಿಕಾರಿಗಳು, ರಾಜಕೀಯ ಮುಖಂಡರ ಮೂಲಕವೇ ಕೆಲ ಹೋಟೆಲ್ಗಳಿಗೆ ಮಾಂಸ ರವಾನೆಯಾಗುತ್ತದೆ ಎಂಬ ಆರೋಪವೂ ಇದೆ. ಮಾಂಸ ದಂಧೆ ನಿರಂತರವಾಗಿ ನಡೆಯುತ್ತಿದೆ ಎಂಬುದನ್ನ ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಟಿ. ಬಾಲಚಂದ್ರ ಒಪ್ಪಿಕೊಂಡಿದ್ದು, ಬೇಟೆಗಾರರ ಹೆಡೆಮುರಿ ಕಟ್ಟುವುದಾಗಿ ತಿಳಿಸಿದ್ದಾರೆ.