ಚಾಮರಾಜನಗರ:ಬೇವಿನಮರದಿಂದ ಹಾಲಿನ ರೂಪದ ದ್ರವ ಬರುವುದನ್ನು ವೀಕ್ಷಿಸಲು ಸರಿರಾತ್ರಿಯೇ ಜನರು ನಾ ಮುಂದು ತಾಮುಂದು ಅಂತಾ ದೌಡಾಯಿಸಿದ ದೃಶ್ಯ ಹನೂರು ತಾಲೂಕಿನ ರಾಮಾಪುರದಲ್ಲಿ ಕಂಡುಬಂದಿದೆ.
ಬೇವಿನ ಮರದಿಂದ ಜಿನುಗುತ್ತಿದೆ ಹಾಲಿನ ರೂಪದ ದ್ರವ ರಾಮಾಪುರ- ದಿನ್ನಹಳ್ಳಿ ರಸ್ತೆಯಲ್ಲಿನ ಬೇವಿನಮರವೊಂದರಲ್ಲಿ ಹಾಲಿನ ರೂಪದ ದ್ರವ ಜಿನುಗುತ್ತಿದ್ದು, ಸಸ್ಯಲೋಕದ ವೈಜ್ಞಾನಿಕ ಸತ್ಯ ಅರಿಯದ ಮುಗ್ದರು ಬೇವಿನ ಮರದಲ್ಲಿ ಹಾಲು ಬರುತ್ತಿದೆ ಎಂದು ನಂಬಿ ರಾತ್ರಿಯಾದರೂ ಟಾರ್ಚ್ ಹಿಡಿದುಕೊಂಡು ತಂಡೋಪತಂಡವಾಗಿ ಬಂದು ಇದು ದೇವಿ ಪವಾಡ ಅನ್ನುತ್ತ ಕಣ್ತುಂಬಿಕೊಳ್ಳುತ್ತಿದ್ದಾರೆ.
ಹಾಲು ಬರುತ್ತಿರುವುದು ಇಂದು ಸಂಜೆ ದಾರಿಹೋಕನೋರ್ವನಿಂದ ತಿಳಿದಿದ್ದು, ರಾತ್ರಿ ವೇಳೆಗೆ ಕಾಡ್ಗಿಚ್ಚಿನಂತೆ ಹಬ್ಬಿದ್ದು ಬೇವಿನ ಮರವನ್ನು ಕಾಣಲು ಜನ ಮುಗಿಬೀಳುತ್ತಿದ್ದಾರೆ. ಆದರೆ, ಸಸ್ಯವಿಜ್ಞಾನದ ಪ್ರಕಾರ ಕೀಟಗಳಿಂದ ಎದುರಾಗುವ ರೋಗವನ್ನು ನಿಯಂತ್ರಿಸಿಕೊಳ್ಳಲು ಈ ದ್ರವ ನೆರವಾಗಲಿದೆ. ಕೀಟಗಳು ಮರವನ್ನು ಕಚ್ಚಿ ರಂಧ್ರ ಕೊರೆದಾಗ ಈ ದ್ರವ ಬರಲಿದ್ದು, ಕೀಟಬಾಧೆಯಿಂದ ದೂರವಾಗಲು ಮರ ಸ್ವಯಂ ರಕ್ಷಣೆಗೆ ಮುಂದಾಗಲಿದೆ ಎಂದು ಹೇಳುತ್ತಾರೆ.
ಯುವಜನತೆ ಇನ್ನಾದರೂ ಗ್ರಾಮಸ್ಥರಿಗೆ ವೈಜ್ಞಾನಿಕ ಸತ್ಯವನ್ನು ತಿಳಿಸಬೇಕಿದೆ.