ಚಾಮರಾಜನಗರ: ರಾಜ್ಯದ ಪ್ರಮುಖ ಮತ್ತು ಹೆಚ್ಚು ಆದಾಯ ಹೊಂದಿರುವ ದೇವಾಲಯಗಳಲ್ಲಿ ಒಂದಾಗಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೋಟ್ಯಂತರ ರೂಪಾಯಿ ನಗದು, ಕೆ.ಜಿಗಟ್ಟಲೇ ಬೆಳ್ಳಿ ಸಂಗ್ರಹವಾಗಿದೆ.
ಗುರುವಾರ ಬೆಳಗ್ಗೆಯಿಂದ ಸಂಜೆವರೆಗೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೇವಲ 27 ದಿನಗಳಲ್ಲಿ ಒಟ್ಟು 1,70,65,814 ರೂ. ಸಂಗ್ರಹವಾಗಿದೆ. ಇದರಲ್ಲಿ ನಾಣ್ಯಗಳೇ 9 ಲಕ್ಷದಷ್ಟಿದೆ. ಇದರೊಂದಿಗೆ 80 ಗ್ರಾಂ ಚಿನ್ನ ಹಾಗೂ 1.4 ಕೆಜಿ ಬೆಳ್ಳಿಯನ್ನು ಏಳುಮಲೆ ಒಡೆಯನಿಗೆ ಭಕ್ತರು ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.