ಕರ್ನಾಟಕ

karnataka

ETV Bharat / state

36 ದಿನಗಳಲ್ಲೇ ಮಲೆಮಹದೇಶ್ವರನಿಗೆ ಹರಿದುಬಂತು ಕೋಟ್ಯಂತರ ಕಾಣಿಕೆ

ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಕೇವಲ 36 ದಿನಗಳಲ್ಲೇ 1.73 ಕೋಟಿ ರೂ. ಸಂಗ್ರಹವಾಗಿದೆ.

hundi-collection-counting-at-malemahadeshwara-temple
ಹುಂಡಿ ಎಣಿಕೆ ಕಾರ್ಯ

By

Published : Sep 28, 2022, 11:03 PM IST

ಚಾಮರಾಜನಗರ:ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ನಡೆದಿದೆ. ಕೇವಲ 36 ದಿನಗಳಲ್ಲೇ 1.73 ಕೋಟಿ ರೂ. ಸಂಗ್ರಹವಾಗಿದೆ.

ಹುಂಡಿ ಎಣಿಕೆ ಕಾರ್ಯ

ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಎಡಿಸಿ ಆಗಿರುವ ಕಾತ್ಯಾಯಿನಿದೇವಿ ಮೇಲ್ವಿಚಾರಣೆಯಲ್ಲಿ ಹುಂಡಿ ಎಣಿಕೆ ನಡೆದಿದೆ. 1,73,56,691 ರೂ. ನಗದು ಕಾಣಿಕೆ ಕಂಡುಬಂದಿದೆ. ಅದರಲ್ಲಿ 10 ಲಕ್ಷ ರೂ.ಗೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಸಲ್ಲಿಸಲಾಗಿದೆ. ಹಣದ ಜೊತೆಗೆ 56 ಗ್ರಾಂ ಚಿನ್ನ, 2.1 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಮಲೆ ಮಹದೇಶ್ವರನಿಗೆ ಭಕ್ತರು ಅರ್ಪಿಸಿದ್ದಾರೆ.

ಹುಂಡಿ ಎಣಿಕೆ ಕಾರ್ಯ

ಇದನ್ನೂ ಓದಿ:ಬೆಳಗಾವಿಯನ್ನು 4 ಜಿಲ್ಲೆಗಳಾಗಿ ವಿಭಜಿಸಲು ಸಿಎಂಗೆ ಒಳ್ಳೆ ಬುದ್ಧಿ ಕೊಡು ತಾಯಿ: ಸವದತ್ತಿ ಯಲ್ಲಮ್ಮನಿಗೆ ಭಕ್ತರ ಹರಕೆ

ABOUT THE AUTHOR

...view details