ಕರ್ನಾಟಕ

karnataka

ETV Bharat / state

ತವರಲ್ಲಿ ದೇವರಾದ ಅಪ್ಪು: ಚಾಮರಾಜನಗರದಲ್ಲಿ 'ಪುನೀತ್' ಫೋಟೋಗಳಿಗೆ ಭಾರಿ ಬೇಡಿಕೆ - puneet

ಅಭಿಮಾನಿಗಳು ದೇವರ ಫೋಟೋಗಳಿಗಿಂತ ಹೆಚ್ಚಾಗಿ ಪುನೀತ್ ರಾಜ್​ಕುಮಾರ್ (Puneet Raj Kumar)​​ ಅವರ ಫೋಟೋವನ್ನು ಕೊಂಡೊಯ್ದು ಪೂಜಿಸಲು ಶುರು ಮಾಡಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ ಚಾಮರಾಜನಗರದಲ್ಲಿ ಪುನೀತ್ ರಾಜ್​ಕುಮಾರ್ (Puneet Raj Kumar)​ ಅವರ ಭಾವಚಿತ್ರಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

Chamarajanagar
ಚಾಮರಾಜನಗರದಲ್ಲಿ 'ಪುನೀತ್' ಫೋಟೋಗಳಿಗೆ ಭಾರಿ ಬೇಡಿಕೆ

By

Published : Nov 13, 2021, 12:41 PM IST

ಚಾಮರಾಜನಗರ: ನಟ ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ (Puneet Raj Kumar)​​ ನಿಧನರಾಗಿ 15 ದಿನ ಕಳೆದರೂ ಅವರ ನೆನಪು ಮಾತ್ರ ಇನ್ನೂ ಕೋಟ್ಯಂತರ ಅಭಿಮಾನಿಗಳನ್ನು ಕಾಡುತ್ತಿದೆ. ಇತ್ತ ನೆಚ್ಚಿನ ನಟನನ್ನು 'ದೇವರಂತೆ' ಆರಾಧಿಸುತ್ತಿರುವ ಘಟನೆ ಅಪ್ಪು ತವರು ಜಿಲ್ಲೆ ಚಾಮರಾಜನಗರದಲ್ಲಿ (Chamarajanagar) ನಡೆದಿದೆ.

ತವರಲ್ಲಿ ದೇವರಾದ ಅಪ್ಪು: ಭಾವಚಿತ್ರವಿಟ್ಟು ಆರಾಧಿಸುತ್ತಿರುವ ಅಭಿಮಾನಿಗಳು

ಹೌದು‌‌‌. ಕಳೆದ ಒಂದು ವಾರದಿಂದ ಪುನೀತ್ ರಾಜ್​ಕುಮಾರ್ (Puneet Raj Kumar)​ ಅವರ ಭಾವಚಿತ್ರಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಬಹುಪಾಲು ಎಲ್ಲ ಫೋಟೋ ಸ್ಟುಡಿಯೋಗಳು 200 - 300 ಫೋಟೋಗಳಿಗೆ ಅಡ್ವಾನ್ಸ್ ಬುಕ್ ಮಾಡಿಕೊಂಡಿದ್ದು, ನಿತ್ಯ ಪುನೀತ್​​ ಫೋಟೋಗಳನ್ನೇ ತಯಾರಿಸುತ್ತಿರುವುದು ಅವರ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿದೆ.

ಅಭಿಮಾನಿಗಳು ದೇವರ ಫೋಟೋಗಳಿಗಿಂತ ಹೆಚ್ಚಾಗಿ ಪುನೀತ್ ರಾಜ್​ಕುಮಾರ್ (Puneet Raj Kumar)​​ ಅವರ ಫೋಟೋವನ್ನು ಕೊಂಡೊಯ್ದು ಪೂಜಿಸಲು ಶುರು ಮಾಡಿದ್ದಾರೆ. ಪುನೀತ್ ಬದುಕಿದ್ದಾಗ ಸಾವಿರಾರು ಜನರಿಗೆ ನೆರವಾಗಿದ್ದಾರೆ. ಆದರ್ಶ ವ್ಯಕ್ತಿಯಾಗಿ ಬದುಕಿದ್ದರು. ಇದೀಗ ಅವರಿಲ್ಲ. ಆದರೂ ಅಭಿಮಾನಿಗಳ ಮನೆ ಮನಗಳಲ್ಲಿ ಪುನೀತ್ ಆರಾಧನೆ ಜೋರಾಗಿದೆ.

ಕಳೆದ 15 ದಿನದಲ್ಲಿ 300ಕ್ಕೂ ಹೆಚ್ಚು ಫೋಟೋ (photo) ಖರೀದಿ ಮಾಡಿದ್ದು, ಮತ್ತೆ ಆರ್ಡರ್ ಬರುತ್ತಿವೆ ಎಂದು ನಗರದ ಫೋಟೋ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ. ಪುನೀತ್ ಅವರನ್ನು ದೇವರಂತೆ ಆರಾಧಿಸುವ ಅಭಿಮಾನಿಗಳು ಹೆಚ್ಚಾಗಿದ್ದಾರೆ. ನಿತ್ಯ ಒಂದಲ್ಲ ಒಂದು ಕಡೆ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತಿದ್ದು, ತವರಿನ ಜನರು ಅಪ್ಪು ಅಗಲಿಕೆಯ ನೋವನ್ನು ಮರೆಯದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ:ದಾವಣಗೆರೆ: ಮದುವೆ ಮನೆ ಊಟ ಸವಿದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ABOUT THE AUTHOR

...view details