ಚಾಮರಾಜನಗರ:ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಶ್ರೀಮಲೆಮಹದೇಶ್ವರ ಬೆಟ್ಟಕ್ಕೆ ಪತ್ನಿಯ ಜೊತೆಗೆ ವಸತಿ ಸಚಿವ ವಿ.ಸೋಮಣ್ಣ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
ಕಾಡಂಚನಲ್ಲಿರುವವರಿಗೆ ವಸತಿ.. ಮಾದಪ್ಪನ ಬೆಟ್ಟದಲ್ಲಿ ಸಚಿವ ವಿ ಸೋಮಣ್ಣ ಭರವಸೆ - Housing Minister V. Somanna visited to MaleMahadeshwara Hills today
ಮೈಸೂರಿನ ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟದೇವರಾದ ಮಾಯಕಾರ ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು ಸಚಿವ ವಿ. ಸೋಮಣ್ಣ.
ಕಾಡಂಚನಲ್ಲಿರುವವರಿಗೆ ವಸತಿ: ಮಾದಪ್ಪನ ಬೆಟ್ಟದಲ್ಲಿ ಸಚಿವ ಸೋಮಣ್ಣ ಭರವಸೆ
ಮೈಸೂರಿನ ಉಸ್ತುವಾರಿ ಸಚಿವವರಾದ ಬಳಿಕ ಇದೇ ಮೊದಲ ಬಾರಿಗೆ ಇಷ್ಟ ದೇವರಾದ ಮಾಯಕಾರ ಮಾದಪ್ಪನ ದರ್ಶನ ಪಡೆದು ₹ 750 ಟಿಕೆಟ್ ಪಡೆದು ನವರತ್ನ ಕಿರೀಟಧಾರಣೆ ಸೇವೆ ಸಲ್ಲಿಸಿದರು.ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಂದಗತಿಯ ಒಳಚರಂಡಿ ಕಾಮಗಾರಿಯಿಂದಾಗಿ ಆಗುತ್ತಿರುವ ಅವಾಂತರಗಳನ್ನು ತಿಳಿದು ಸಂಬಂಧಪಟ್ಟವರ ಜೊತೆ ಚರ್ಚಿಸಿ ಕಾಮಗಾರಿ ಶೀಘ್ರವಾಗಿ ಪೂರ್ಣ ಗೊಳಿಸಲಾಗುವುದು. ಬೇಡಗಂಪಣ್ಣ ಸಮುದಾಯ ಹಾಗೂ ಕಾಡಂಚಿನಲ್ಲಿ ವಾಸವಾಗಿರುವ ಎಲ್ಲರಿಗೂ ವಸತಿ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಇದೇ ವೇಳೆ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.